ಕರ್ನಾಟಕ ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ನಿವೃತ್ತಿ, ರಾಜೀನಾಮೆ ಅಥವಾ ಮರಣ ಸೇರಿ ವಿವಿಧ ಕಾರಣಗಳಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಹಣಕಾಸು ಇಲಾಖೆಯು ಹಸಿರು ನಿಶಾನೆ ತೋರಿಸಿದೆ.
ಒಟ್ಟು 430 ಶಿಕ್ಷಕ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ನೇಮಕಾತಿಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು, ಸದರಿ ಪ್ರಸ್ತಾವನೆಯನ್ನು ಪರಿಗಣಿಸಿದ ಇಲಾಖೆಯು ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ 173 ಬೋಧಕ ಹುದ್ದೆ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳಲ್ಲಿನ 250 ಹುದ್ದೆಗಳ ಭರ್ತಿಗಾಗಿ ಅನುಮೋದನೆ ನೀಡಿರುವ ಕುರಿತು ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿರುತ್ತಾರೆ.
ಕಾರಣ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿ....
ಈ ಕುರಿತು ಇನ್ನಷ್ಟು ಮಾಹಿತಿಯನ್ನು ಮತ್ತೆ ಶೀಘ್ರದಲ್ಲಿಯೇ ಹಂಚಿಕೊಳ್ಳಲಾಗುವುದು ನಿರೀಕ್ಷಿಸಿ.
Comments