KEAಯಿಂದ (K-SET) ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 2023 ಮತ್ತು 2024 ರಲ್ಲಿ ಅರ್ಹರಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಅಧಿಸೂಚನೆ ಪ್ರಕಟ
Published by: Yallamma G | Date:19 ಮಾರ್ಚ್ 2025
Image not found

ಕೆಸೆಟ್ 2024 ಮೂಲದಾಖಲೆ ಪರಿಶೀಲನೆ : 
      ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್-2024) ರಲ್ಲಿ ಅರ್ಹರಾದ ಎಲ್ಲಾ 41 ವಿಷಯಗಳ ಅಭ್ಯರ್ಥಿಗಳಿಗೆ ದಿನಾಂಕ 13.01.2025 ರಿಂದ 20.01.2025 ರ ವರೆಗೆ ಮತ್ತು 31.01.2025 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಕೆಲವು ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಗೈರು ಹಾಜರಾಗಿರುವುದು ಕಂಡುಬಂದಿರುತ್ತದೆ.


                13.01.2025 ರಿಂದ 20.01.2025 ವರೆಗೆ 31.01.2025 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಕೆಸೆಟ್-2024 ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರಿದ್ದು ಗೈರುಹಾಜರಾದ ಅಭ್ಯರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಂಡು ಫಲಿತಾಂಶ ಘೋಷಣೆಗೊಂಡಿರುವ ಅರ್ಹ ಅಭ್ಯರ್ಥಿಗಳು ಮಾತ್ರ ದಿನಾಂಕ 04.04.2025 ರಂದು ಬೆಳಿಗ್ಗೆ 10.00 ಕ್ಕೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗತಕ್ಕದ್ದು.


                      ಶೈಕ್ಷಣಿಕ ಅರ್ಹತೆ ಮತ್ತು ಮೀಸಲಾತಿ ಸಂಬಂಧಿಸಿದ ಎಲ್ಲಾ ನಿಬಂಧನೆಗಳು ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲಾತಿ ಪ್ರಮಾಣ ಪತ್ರಗಳ ವಿವರಗಳಿಗೆ ದಿನಾಂಕ 13.07.2024 ರ ಅಧಿಸೂಚನೆಯನ್ನು ಮತ್ತು ದಿನಾಂಕ 09.01.2025 ರ ಮಾರ್ಗಸೂಚಿಯನ್ನು ಓದಿಕೊಳ್ಳಲು ಸೂಚಿಸಿದೆ.


ಕೆಸೆಟ್ 2023 ಮೂಲದಾಖಲೆ ಪರಿಶೀಲನೆ : 
                  ಕೆಸೆಟ್-2023 ಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಹಾಗೂ (PG Degree - Pursuing) ಸ್ನಾತಕೊತ್ತರ ಪದವಿ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು, ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿದ್ದಲ್ಲಿ, ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಂಡಿರುವ ಬಗ್ಗೆ ಮೂಲ ಅಂಕಪಟ್ಟಿಯನ್ನು ಮತ್ತು ಈಗಾಗಲೇ ಪ್ರಾಧಿಕಾರದಿಂದ ಮೂಲ ದಾಖಲಾತಿ ಪರಿಶೀಲನಾ ಸಮಯದಲ್ಲಿ ನೀಡಿದ Verification Slip ಜೊತೆಗೆ ಇತರೆ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಿ ದಿನಾಂಕ 04.04.2025 ರಂದು ಬೆಳಿಗ್ಗೆ 10.00 ಘಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು. ಇಲ್ಲಿ ತಮ್ಮ ಕೆಸೆಟ್ ಪ್ರಮಾಣ ಪತ್ರಗಳನ್ನು ಪಡೆಯಲು ಸೂಚಿಸಿದೆ.


                ಶೈಕ್ಷಣಿಕ ಅರ್ಹತೆ ಮತ್ತು ಮೀಸಲಾತಿ ಸಂಬಂಧಿಸಿದ ಎಲ್ಲಾ ನಿಬಂಧನೆಗಳು ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲಾತಿ ಪ್ರಮಾಣ ಪತ್ರಗಳ ವಿವರಗಳಿಗೆ ದಿನಾಂಕ 11.09.2023 ರ ಅಧಿಸೂಚನೆಯನ್ನು ಓದಿಕೊಳ್ಳಲು ಸೂಚಿಸಿದೆ.

Comments