ಭಾರತೀಯ ರೈಲ್ವೆ ಇಲಾಖೆಯ ಲೆವಲ್-1 ಹುದ್ದೆಗಳಿಗೆ (ಹಿಂದಿನ ಗ್ರೂಪ್-ಡಿ) ನೇಮಕಾತಿಗೆ ಇದ್ದ ಕನಿಷ್ಠ ವಿದ್ಯಾರ್ಹತೆಯ ಮಾನದಂಡಗಳನ್ನು ರೈಲ್ವೆ ಮಂಡಳಿ ಸಡಿಲಿಸಿದೆ.
ಹೊಸ ಮಾರ್ಗಸೂಚಿಗಳ ಅಡಿಯಲ್ಲಿ 10 ನೇ ತರಗತಿಯನ್ನು ಪೂರ್ಣಗೊಳಿಸಿದ ಅಥವಾ ITI ಡಿಪ್ಲೊಮಾವನ್ನು ಹೊಂದಿರುವ ಅಭ್ಯರ್ಥಿಗಳು ಅಥವಾ ರಾಷ್ಟ್ರೀಯ ವೃತ್ತಿಪರ ತರಬೇತಿಯ ರಾಷ್ಟ್ರೀಯ ಕೌನ್ಸಿಲ್ (NCVT) ನೀಡುವ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರುವ ಅಭ್ಯರ್ಥಿಗಳು ಲೆವಲ್-1 ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಈ ಮೊದಲು ತಾಂತ್ರಿಕ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರುವವರು ಅಥವಾ ಐಟಿಐ ಡಿಪ್ಲೊಮಾವನ್ನು ಹೊಂದಿರುವುದು ಅತ್ಯಗತ್ಯವಾಗಿತ್ತು. ಜನವರಿ 2ರಂದು ಎಲ್ಲಾ ರೈಲ್ವೆ ವಲಯಗಳಿಗೆ ಮಂಡಳಿಯು ಕಳುಹಿಸಿರುವ ಲಿಖಿತ ಸಂದೇಶದಲ್ಲಿ ಈ ಹಿಂದಿನ ಸೂಚನೆಗಳನ್ನು ನಿರ್ಲಕ್ಷಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ರೈಲ್ವೆ ನೇಮಕಾತಿ ಮಂಡಳಿ ಲೆವಲ್-1 ಹುದ್ದೆಗೆ ಖಾಲಿ ಇರುವ 32 ಸಾವಿರ ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಇದರ ನೇಮಕಾತಿ ಪ್ರಕ್ರಿಯೆ ಜನವರಿ.23 ರಿಂದ ಫೆಬ್ರುವರಿ.22ರವರೆಗೆ ನಡೆಯಲಿದೆ.
Comments