Loading..!

ಭಾರತೀಯ ರೈಲ್ವೆ ಇಲಾಖೆಯಲ್ಲಿ 1.52 ಲಕ್ಷ ಹುದ್ದೆಗಳಿಗೆ ಹಂತ ಹಂತವಾಗಿ ಶೀಘ್ರದಲ್ಲೇ ನೇಮಕಾತಿ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Bhagya R K | Date:4 ಜುಲೈ 2023
Image not found

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2.74 ಲಕ್ಷ ಹುದ್ದೆಗಳ ಪೈಕಿ 1.52 ಲಕ್ಷ ಹುದ್ದೆಗಳನ್ನು ಶೀಘ್ರದಲ್ಲೇ ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಮಾಹಿತಿ ಹಕ್ಕು ಕಾಯಿದೆ (ಆರ್ ಟಿ ಐ) ಕಾರ್ಯಕರ್ತರಾದ ಚಂದ್ರಶೇಖರ್ ಗೌರ್ ಅವರು ಆರ್ ಟಿ ಐ ಮೂಲಕ ಇತ್ತೀಚಿಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 1.52 ಲಕ್ಷ ಹುದ್ದೆಗಳನ್ನು ನೇಮಕಾತಿ ಮಾಡುವದಾಗಿ ತಿಳಿಸಿದ್ದಾರೆ. ಆ ಮೂಲಕ ನಿರುದ್ಯೋಗ ನಿರ್ಮೂಲನೆ ಮಾಡುತ್ತೇವೆ' ಎಂದು ತಿಳಿಸಿದ್ದಾರೆ. 
ಸ್ನೇಹಿತರೆ, ಈ ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯು ಚಾಲನೆಗೊಳ್ಳುವ ಸಾಧ್ಯತೆಯಿದ್ದು, ನೀವು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST 

Comments

A Gangadhara Ganag ಜುಲೈ 5, 2023, 9:38 ಅಪರಾಹ್ನ
Sagar Naik ಆಗ. 27, 2023, 11:03 ಪೂರ್ವಾಹ್ನ