Loading..!

BBMP ಯಿಂದ ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
Published by: Yallamma G | Date:17 ಅಕ್ಟೋಬರ್ 2024
Image not found

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BBMP)ಯು ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪ ಯೋಜನೆ (ಟಿ.ಎಸ್.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್.ಟಿ)ಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಯ (ವಸತಿ ಸಹಿತ / ವಸತಿ ರಹಿತ) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸದರಿ ತರಬೇತಿಯನ್ನು ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 


* ಲಘು ವಾಹನ ಚಾಲನಾ ತರಬೇತಿಗೆ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು :   
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. (ಅರ್ಜಿ ಸಲ್ಲಿಕೆ ದಿನಾಂಕಕ್ಕೆ)
- ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ.
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5


* ಭಾರಿ ವಾಹನ ಚಾಲನಾ ತರಬೇತಿ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು : 
- ಕನಿಷ್ಠ 20 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. ಮತ್ತು ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು. (ಅರ್ಜಿ ಸಲ್ಲಿಕೆ ದಿನಾಂಕಕ್ಕೆ)
- ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ.
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5


               ತರಬೇತಿಗೆ ಹಾಜರಾಗುವ ವೇಳೆಯಲ್ಲಿ ಅಭ್ಯರ್ಥಿಗಳು ಮೂಲ ದಾಖಲೆ, ಸೇವಾ ಸಿಂಧು ಪೋರ್ಟರ್ ನಲ್ಲಿ ಮುದ್ರಿತ ಅರ್ಜಿ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಮೊದಲು ಬಂದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.  ತರಬೇತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್ ಸೈಟ್ www.mybmtc.gov.in ನಿಂದ ಅಥವಾ ದೂರವಾಣಿ : 6364858520 / 7760991085 ಮುಖಾಂತರ ಪಡೆಯಬಹುದಾಗಿದೆ. 

Comments