Loading..!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:17 ಜೂನ್ 2024
Image not found
 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ ಭಾರತೀಯ ಸೇನೆ, ಕೇಂದ್ರೀಯ ಪೊಲೀಸ್ ಪಡೆ ಅಥವಾ ಇತರ ಸಮವಸ್ತ್ರ ಪೊಲೀಸ್ ಸೇವೆಯನ್ನು ಸೇರ ಬಯಸುವ SSLC ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವ ಸಿದ್ಧತೆ ಹಾಗೂ ವೃತ್ತಿ ಮಾರ್ಗದರ್ಶನದ ಬಗ್ಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತಿದ್ದು ಆಸಕ್ತ ಅಭ್ಯರ್ಥಿಗಳುಜು.10 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಿಂದುಳಿದ ಪ್ರವರ್ಗ 1, 2ಎ, ಹಾಗೂ 3ಎ, 3ಬಿ ಪ್ರವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2024-25 ಸಾಲಿನಲ್ಲಿ ತರಬೇತಿ ನೀಡಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳು ಇಲಾಖೆ ಹಾಗೂ ಕುಟುಂಬದ ಗರಿಷ್ಠ ಆದಾಯ ಮಿತಿ ಪ್ರವರ್ಗ-1ಕ್ಕೆ 2.50 ಲಕ್ಷ ರೂ., ಪ್ರವರ್ಗ 2ಎ, 3ಎ, 3ಬಿ ವರ್ಗಗಳಿಗೆ 1 ಲಕ್ಷ ರೂ. ಎಂದು ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣನಾಗಿದ್ದು, ಪ್ರತಿ ವಿಷಯದಲ್ಲಿ ಶೇ.33 ಹಾಗೂ ಸರಾಸರಿ ಶೇ.45 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಅಜಿಯನ್ನು ಸಲ್ಲಿಸಬಹುದಾಗಿರುತ್ತದೆ. 10 ಜುಲೈ 2004 ರಿಂದ ಜುಲೈ 10 2007 ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

Comments