ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ವಿವರಗಳು :
ಸಹಾಯಕ ಪ್ರಾಧ್ಯಾಪಕರು - 3
ಪ್ರಾಧ್ಯಾಪಕರು - 5
ಅಸೋಸಿಯೇಟ್ ಪ್ರೊಫೆಸರ್ - 2
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) - 1
ವಿದ್ಯಾರ್ಹತೆ :
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ, Diploma, Phd, BE/B.Tech ಅಥವಾ M.Phil ಪೂರ್ಣಗೊಳಿಸಿರಬೇಕು.
ವಯೋಮಿತಿ :
ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳಾಗಿರಬೇಕು.
ಅರ್ಜಿಶುಲ್ಕ :
- ಬೋಧನಾ ಹುದ್ದೆಗಳು :
- ಮಹಿಳಾ/ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
- SC/ST ಅಭ್ಯರ್ಥಿಗಳಿಗೆ : ₹1000/-
- ಯುಆರ್/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹2500/-
- ಬೋಧಕೇತರ ಹುದ್ದೆಗಳು :
- SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಇಲ್ಲ
- ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ : ₹1000/-
ವೇತನ ಶ್ರೇಣಿ :
ಹುದ್ದೆಯ ಪ್ರಕಾರ ₹35,400/- ರಿಂದ ₹1,12,400/- ವರಗೆ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ :
ಕಿರುಪಟ್ಟಿ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ [https://cuk.ac.in/#/home](https://cuk.ac.in/#/home) ಗೆ ಭೇಟಿ ನೀಡಿ.
2. ಅಧಿಸೂಚನೆಯನ್ನು ಓದಿ, ಅರ್ಜಿಯ ಅರ್ಹತೆಗಳ ಪರಿಶೀಲನೆ ಮಾಡಿ.
3. ಅರ್ಜಿ ನಮೂನೆಯನ್ನು ಶುದ್ಧವಾಗಿ ಭರ್ತಿ ಮಾಡಿ.
4. 22-03-2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
5. ಹಾರ್ಡ್ ಕಾಪಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ:
ಅರ್ಜಿ ಸಲ್ಲಿಸುವ ವಿಳಾಸ :
Deputy Registrar, Recruitment Cell, Central University of Karnataka,
Kadaganchi, Aland Road, Kalaburagi District-585367
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-02-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-03-2025
- ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ: 01-04-2025
ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಿ, ಸರ್ಕಾರೀ ಹುದ್ದೆ ಪಡೆಯುವ ಅವಕಾಶವನ್ನು ಬಳಸಿಕೊಳ್ಳಲು ಸಲಹೆ ನೀಡಲಾಗಿದೆ.
Comments