ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್(ECSC) ಮೈಸೂರಿನ ಕಿರಿಯ ಪವರ್ ಮ್ಯಾನ ಹುದ್ದೆಗಳ ನೇಮಕಾತಿಗಾಗಿ 14/20/2024 ರಂದು ಅಧಿಕೃತ ಅದಿಸೂಚೆನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಸ್ಥಾನಗಳ 1:5 ರ ಅನುಪಾತದಲ್ಲಿ ಹುದ್ದೆವಾರು ಅರ್ಹ ಅಭ್ಯರ್ಥಿಗಳ ಪಟ್ಟಿಗಳನ್ನು ಕಟ್-ಆಫ್ ಅಂಕಗಳೊಂದಿಗೆ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್ ವೆಬ್‌ಸೈಟ್ ನಲ್ಲಿ ಇದೀಗ ಪ್ರಕಟಿಸಲಾಗಿದೆ. ಸದರಿ ಪಟ್ಟಿಗಳು ಆಯ್ಕೆ ಪಟ್ಟಿಯಾಗಿರುವುದಿಲ್ಲ ಹಾಗೂ ಅರ್ಹ ಅಭ್ಯರ್ಥಿಗಳ ಪಟ್ಟಿಗಳನ್ನು ಆನ್-ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ತಿಳಿಸಿರುವ ಮಾಹಿತಿಯ ಅನುಗುಣವಾಗಿ ಪ್ರಕಟಿಸಲಾಗಿದೆ.
ಸರ್ಕಾರದ Digilocker ತಂತ್ರಾಂಶವನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ದಾಖಲಾತಿಗಳ ಪರಿಶೀಲನೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧವಾಗಿ 1:5ರ ಅನುಪಾತದ ಪಟ್ಟಿಯಲ್ಲಿ ಸೇರಿರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವಂತೆ ಸೂಕ್ತ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ದಾಖಲಾತಿಗಳನ್ನು ECSC ವೆಬ್‌ಸೈಟ್ ನಲ್ಲಿ ಸೂಕ್ತ ರೀತಿಯಲ್ಲಿ upload ಮಾಡುವಂತೆ ತಿಳಿಸಲಾಗಿದೆ.
1. ದಾಖಲಾತಿ ಪರಿಶೀಲನೆ ಪಟ್ಟಿಯಲ್ಲಿ ಸೇರಿರುವಂತಹ ಎಲ್ಲಾ ಅಭ್ಯರ್ಥಿಗಳು ಮೊದಲಿಗೆ Digilocker ತಂತ್ರಾಂಶ ಬರಿ Register ಮಾಡಿಕೊಂಡು, ತಮ್ಮ ಆಧಾರ್ ಸಂಖ್ಯೆಯೊಂದಿಗೆ Login ಆಗಿ, 10ನೇ ತರಗತಿ, ಜಾತಿ ಪ್ರಮಾಣ ಪತ್ರ, UDID Card ಪ್ರಮಾಣ ಪತ್ರಗಳನ್ನು Issued documents ನಲ್ಲಿ ಪಡೆಯತಕ್ಕದ್ದು.
2. 1:5ರ ಅನುಪಾತದ ಪಟ್ಟಿಯಲ್ಲಿ ಸೇರಿರುವ ಅಭ್ಯರ್ಥಿಗಳು ಆನ್-ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಾರಣಾಂತರಗಳಿಂದ ಭಾವಚಿತ್ರ/ಸಹಿ ತಪ್ಪಾಗಿ ನಮೂದಾಗಿದಲ್ಲಿ, document upload module ನಲ್ಲಿ login ಮಾಡಿದ ಕೂಡಲೇ "ನೀವು ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಭಾವಚಿತ್ರ ಮತ್ತು ಸಹಿ ಅಪ್‌ಲೋಡ್ ಮಾಡುವಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿದೆಯೇ?" ಎಂಬುವುದಕ್ಕೆ "ಹೌದು" ಎಂಬ ಗುಂಡಿಯನ್ನು ಒತ್ತಿ, ತಮ್ಮ ಸರಿಯಾದ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡತಕ್ಕದ್ದು.
3. ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ e-sign ಪ್ರಕ್ರಿಯೆ ಪೂರ್ಣಗೊಳಿಸದೇ ಇದ್ದಲ್ಲಿ, document upload module ನಲ್ಲಿ ದಾಖಲಾತಿಗಳನ್ನು ಅಪ್ ಲೋಡ್ ಮಾಡುವ ಮುನ್ನ ತಮ್ಮ ಆಧಾರ್ ಸಂಖ್ಯೆಯೊಂದಿಗೆ e-sign ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು.
4.Digilockers Issued documentsನಲ್ಲಿ ದಾಖಲಾತಿಗಳನ್ನು fetch ಮಾಡಿಕೊಂಡ ನಂತರ, ECSC ವೆಬ್‌ಸೈಟ್‌ಗೆ ಭೇಟಿ ನೀಡಿ ಅಭ್ಯರ್ಥಿಗಳು ದಾಖಲಾತಿ ಅಪ್ ಲೋಡ್ ಮಾಡುವ ಸಲುವಾಗಿ ತಿಳಿಸಿರುವ ಲಿಂಕ್ ಅನ್ನು ಒತ್ತಿ, ವೆಬ್‌ಸೈಟ್‌ನಲ್ಲಿ ತಿಳಿಸಿರುವ ಮಾರ್ಗಸೂಚಿಯನ್ನು ಪಾಲಿಸುವುದರೊಂದಿಗೆ, ಅರ್ಜಿಯಲ್ಲಿ ಕೋರಿರುವ ಮೀಸಲಾತಿಗಳಿಗೆ ಅನುಗುಣವಾಗಿ, ದಾಖಲಾತಿಗಳನ್ನು ಸಲ್ಲಿಸುವುದು.
5. Digilocker ತಂತ್ರಾಂಶದಲ್ಲಿ ಲಭ್ಯವಿಲ್ಲದೇ ಇರುವಂತಹ ದಾಖಲೆಗಳನ್ನು ಅಭ್ಯರ್ಥಿಗಳು 500 KB ಮೀರದಂತಹ pdf document ಗಳಾಗಿ ಸ್ಕ್ಯಾನ್ ಮಾಡಿಕೊಂಡು ತಂತ್ರಾಂಶದ Document Upload ವಿಭಾಗದಲ್ಲಿ ಸಂಬಂಧಪಟ್ಟ ಮೀಸಲಾತಿ ಮುಂದೆ ಅಪ್ ಲೋಡ್ ಮಾಡುವುದು.
6. ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳನ್ನು ಅಪ್-ಲೋಡ್ ಮಾಡಿದ ನಂತರ, ತಮ್ಮ ಆಧಾರ್ ಸಂಖ್ಯೆಯೊಂದಿಗೆ e-sign ಮಾಡುವುದು. e-sign ಮಾಡುವ ಮುನ್ನ, ತಾವು ಎಲ್ಲಾ ದಾಖಲಾತಿಗಳನ್ನು ನಿಗಧಿತ ನಮೂನೆಗಳಲ್ಲಿ ಅಪ್-ಲೋಡ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳತಕ್ಕದ್ದು ಹಾಗೂ ಅದರ ಒಂದು ಮುದ್ರಿತ ಪ್ರತಿಯನ್ನು /soft-copy ಪಡೆದಿಟ್ಟುಕೊಳ್ಳತಕ್ಕದ್ದು.
- ದಾಖಲಾತಿ ಅಪ್ ಲೋಡ್ ಮಾಡಲು ಅಭ್ಯರ್ಥಿಗಳಿಗೆ 27.02.2025 ರಿಂದ 10.03.2025 ರವರೆಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
To Download Official Announcement
Karnataka SET Document Verification
K-SET Certificate Verification Process
K-SET Verification Dates 2025
K-SET Document Submission Guidelines
K-SET Certificate Verification Centers
Comments