Loading..!

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:26 ಫೆಬ್ರುವರಿ 2025
Image not found

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025ನೇ ಸಾಲಿನ ನೇಮಕಾತಿ ಮೂಲಕ ಖಾಲಿ ಇರುವ 2 ಆಫೀಸ್ ಅಸಿಸ್ಟೆಂಟ್ ಮತ್ತು ವಾಚುಮನ್ ಕಮ್ ಗಾರ್ಡನರ್ ಕ್ರೆಡಿಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಬಯಸುವವರು ಮತ್ತು ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಯವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. 


 ಹುದ್ದೆಗಳ ವಿವರ :
ಕಚೇರಿ ಸಹಾಯಕ : 1
ವಾಚ್‌ಮನ್ ಕಮ್ ಗಾರ್ಡನರ್ ಕ್ರೆಡಿಟ್ ಆಫೀಸರ್ : 1 


ಮಾಸಿಕ ವೇತನ : 
ಕಚೇರಿ ಸಹಾಯಕ : ರೂ. 12,000/-
ವಾಚ್‌ಮನ್ ಕಮ್ ಗಾರ್ಡನರ್ ಕ್ರೆಡಿಟ್ ಆಫೀಸರ್ : ರೂ. 6,000/- 


ವಿದ್ಯಾರ್ಹತೆ : 
ಕಚೇರಿ ಸಹಾಯಕ : BSW/BA/B.Com ಪದವಿ ಹೊಂದಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮೂಲ ಲೆಕ್ಕಪತ್ರಗಳ ಜ್ಞಾನ, ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ, MS Office, Tally ಮತ್ತು ಇಂಟರ್ನೆಟ್‌ನಲ್ಲಿ ಪ್ರಾವೀಣ್ಯತೆ ಅಗತ್ಯ.
ವಾಚ್‌ಮನ್ ಕಮ್ ಗಾರ್ಡನರ್ ಕ್ರೆಡಿಟ್ ಆಫೀಸರ್ : ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಕೃಷಿ/ತೋಟಗಾರಿಕೆ/ಹಾರ್ಟಿಕಲ್ಚರ್‌ನಲ್ಲಿ ಅನುಭವ ಹೊಂದಿರುವವರು ಆದ್ಯತೆ.


ವಯೋಮಿತಿ : 22 ರಿಂದ 40 ವರ್ಷ


ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.


ಆಯ್ಕೆ : 
ಕೌಶಲ್ಯ ಪರೀಕ್ಷೆ ಮತ್ತು ನೇರ ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 


ಅರ್ಜಿ ಸಲ್ಲಿಸುವ ವಿಧಾನ: 
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ 2025 ಮಾರ್ಚ್ 7ರೊಳಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಆರ್‌ಎಸ್‌ಇಟಿ ಕೇಂದ್ರ, ಬುಲ್ದಾನಾ ಜಿಲ್ಲೆಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆಗಾಗಿ, ಅಧಿಕೃತ ವೆಬ್‌ಸೈಟ್ (centralbankofindia.co.in) ಗೆ ಭೇಟಿ ನೀಡಿ.


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 07/03/2025
ಅರ್ಜಿ ಸಲ್ಲಿಸುವ ವಿಳಾಸ : 
Regional Manager/Co-Chairman, Dist. Level RSETI Advisory Committee (DLRAC), Central Bank of India, Regional Office-Akola, "Mangesh" Mangal Karyalay, Adarsh Colony, Akola 444004.

Comments