ಸಿಎಸ್ಐಆರ್-ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) 2025ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಸಂಸ್ಥೆಯು ವಿಜ್ಞಾನಿ ಮತ್ತು ಮುಖ್ಯ ವಿಜ್ಞಾನಿ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 31 ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು 4 ಏಪ್ರಿಲ್ 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
ಮುಖ್ಯ ವಿಜ್ಞಾನಿ - 2
ಹಿರಿಯ ವಿಜ್ಞಾನಿ - 2
ವಿಜ್ಞಾನಿ - 27
ಶೈಕ್ಷಣಿಕ ಅರ್ಹತೆ :
- ಮುಖ್ಯ ವಿಜ್ಞಾನಿ : ಪಿಎಚ್.ಡಿ
- ಹಿರಿಯ ವಿಜ್ಞಾನಿ : ಪಿಎಚ್.ಡಿ
- ವಿಜ್ಞಾನಿ : ಎಂ.ಆರ್ಕ್, ಎಂ.ಇ ಅಥವಾ ಎಂ.ಟೆಕ್, ಪಿಎಚ್.ಡಿ
ವಯೋಮಿತಿ :
ಮುಖ್ಯ ವಿಜ್ಞಾನಿ - 45
ಹಿರಿಯ ವಿಜ್ಞಾನಿ - 37
ವಿಜ್ಞಾನಿ - 32
ವಯೋಮಿತಿ ಸಡಿಲಿಕೆ:
- ಓಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳಿಗೆ: 3 ವರ್ಷಗಳು
- ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು
- ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಓಬಿಸಿ) ಅಭ್ಯರ್ಥಿಗಳಿಗೆ: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು
ವೇತನ ವಿವರ :
- ಮುಖ್ಯ ವಿಜ್ಞಾನಿ : ರೂ.1,23,100/- ಪ್ರತಿ ತಿಂಗಳು
- ಹಿರಿಯ ವಿಜ್ಞಾನಿ : ರೂ.78,800/- ಪ್ರತಿ ತಿಂಗಳು
- ವಿಜ್ಞಾನಿ : ರೂ.67,700/- ಪ್ರತಿ ತಿಂಗಳು
ಅರ್ಜಿಯ ಶುಲ್ಕ :
- ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಹಿಳೆ/ಭೂತಪೂರ್ವ ಸೈನಿಕ/ವಿದೇಶಿ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ರೂ.500/-
ಆಯ್ಕೆ ಪ್ರಕ್ರಿಯೆ :
ಅರ್ಹತೆ, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
1. ಆಧಿಕೃತ ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಗಳನ್ನು ಪರಿಶೀಲಿಸಿ.
2. ಆನ್‌ಲೈನ್ ಅರ್ಜಿಯನ್ನು ಭರ್ತಿಗೆ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ.
3. ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ (ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಜ್ಯೂಮ್, ಅನುಭವ ಇತ್ಯಾದಿ).
4. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
5. ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
6. ಅರ್ಜಿಯ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ (ಅಗತ್ಯವಿದ್ದಲ್ಲಿ ಮಾತ್ರ).
7. ಅಂತಿಮವಾಗಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ, ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಸಂರಕ್ಷಿಸಿ.
ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 5 ಮಾರ್ಚ್ 2025
- ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ : 4 ಏಪ್ರಿಲ್ 2025
ಹೆಚ್ಚಿನ ಮಾಹಿತಿಗಾಗಿ, ಸಿಬಿಆರ್‌ಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
To Download Official Announcement
CSIR CBRI job openings 2025
CBRI application form 2025
CBRI eligibility criteria 2025
CBRI exam date 2025
CBRI admit card 2025
CBRI result 2025
CBRI career opportunities 2025
Comments