ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗುತ್ತಿಗೆ ಆಧಾರದ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 35 ಗ್ರಾಜುವೇಟ್ ಇಂಜಿನಿಯರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ B.E ಅಥವಾ B.Tech ಪದವಿ ಹೊಂದಿರಬೇಕು.
ವಯೋಮಿತಿ: ಗರಿಷ್ಠ 35 ವರ್ಷ. ವಯೋಮಿತಿಯಲ್ಲಿ ಸಡಿಲಿಕೆ ಸರ್ಕಾರದ ನಿಯಮಗಳ ಪ್ರಕಾರ ಲಭ್ಯವಿದೆ.
ಆಯ್ಕೆ ಪ್ರಕ್ರಿಯೆ:
GATE ಸ್ಕೋರ್
ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ/ವೈದ್ಯಕೀಯ ಪರೀಕ್ಷೆ/ದಾಖಲೆಗಳ ಪರಿಶೀಲನೆ
ಮೂಲಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು BMRCL ಅಧಿಕೃತ ವೆಬ್‌ಸೈಟ್ english.bmrc.co.in ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಗಮನವಾಗಿ ಓದಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಸಂಗ್ರಹಿಸಿ.
- ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಭರ್ತಿಯಾದ ಅರ್ಜಿ ನಮೂನೆಯ ಪ್ರತಿಯನ್ನು ಹಾಗೂ ಅಗತ್ಯ ದಾಖಲೆಗಳ ಸ್ವಯಂ ಸಾಕ್ಷ್ಯಾಪ್ತ ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ 2025 ಮೇ 7ರೊಳಗೆ ಕಳುಹಿಸಬೇಕು:
ವಿಳಾಸ :
ಸಾಮಾನ್ಯ ವ್ಯವಸ್ಥಾಪಕರು (ಮಾನವ ಸಂಪತ್ತು),
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,
ಮೂರನೇ ಮಹಡಿ, BMTC ಕಾಂಪ್ಲೆಕ್ಸ್,
ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560027.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 2025 ಏಪ್ರಿಲ್ 5
ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 2025 ಮೇ 3
ಸಹಿ ಮಾಡಿದ ಅರ್ಜಿ ಪ್ರತಿಯ ಸ್ವೀಕೃತಿಯ ಕೊನೆಯ ದಿನಾಂಕ: 2025 ಮೇ 7
To Download Official Announcement
Bangalore Metro Jobs 2025
BMRCL Job Notification 2025
BMRCL Vacancy 2025
Namma Metro Recruitment 2025
BMRCL Careers 2025
Comments