ಜಿಲ್ಲಾ ಕಚೇರಿ, ಜಿಲ್ಲಾ ಪಂಚಾಯತ್, ಉದ್ಯೋಗ ವಿನಿಮಯ ಕೇಂದ್ರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ - 2025 ನಡೆಯುತ್ತಿದೆ.
ಈ ಉದ್ಯೋಗ ಮೇಳವು 2025ರ ಫೆಬ್ರವರಿ 1 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 4:00 ರವರೆಗೆ ಕಲಾಭವನ (ಮ್ಯೂಸಿಯಂ) ನವನಗರ, ಬಾಗಲಕೋಟೆನಲ್ಲಿ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಕೌಶಲ್ಯಗಳ ಅಭಿವೃದ್ದಿ, ಕ್ಯಾರಿಯರ್ ಅಭಿವೃದ್ಧಿ, ಮತ್ತು ಹೊಸ ಉದ್ಯೋಗಗಳಿಗಾಗಿ ಇಂಟರ್ವ್ಯೂ ಚಾನ್ಸ್ ನೀಡಲು ಉದ್ದೇಶಿಸಲಾಗಿದೆ.
ಮೇಳದ ಪ್ರಮುಖಾಂಶಗಳು:
- 40ಕ್ಕೂ ಹೆಚ್ಚು ಹೆಸರಾಂತ ಮಲ್ಟಿನ್ಯಾಷನಲ್ ಕಂಪನಿಗಳು (MNCs) ಮತ್ತು ಪ್ರಾದೇಶಿಕ ಸಂಸ್ಥೆಗಳು ಭಾಗವಹಿಸುತ್ತವೆ.
- IT, Manufacturing, HealthCare, Education, Sales & Marketing ಮುಂತಾದ ವೃತ್ತಿ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿರುತ್ತವೆ.
- 18 ರಿಂದ 35 ವರ್ಷ ವಯಸ್ಸಿನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ. ಜಾಬ್ ಇಂಟರ್ವ್ಯೂ ತಕ್ಷಣದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
- ಅರ್ಜಿ ಸಲ್ಲಿಕೆ ಮತ್ತು ಪ್ರಕ್ರಿಯೆ:
ಆಧಾರ್ ಕಾರ್ಡ್, ಪ್ರಮಾಣಪತ್ರಗಳು ಮತ್ತು ನಿಮ್ಮ ಅಪ್‌ಡೇಟೆಡ್ ರೆಸ್ಯೂಮ್ ತರಲು ತಪ್ಪದೆ ಗಮನ ಕೊಡಿ.
- ವೃತ್ತಿ ತರಬೇತಿ (Skill Development) ಮತ್ತು ಪ್ರಮುಖ ಉದ್ಯೋಗ ತಂತ್ರಗಳು ಕುರಿತು ಮಾಹಿತಿ ಪಡೆಯಲು ಅವಕಾಶ.
- ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ : 118 ನವನಗರ ಬಾಗಲಕೋಟಿ
- ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08354-295210 / 8147111236, 6362700132 ಅನ್ನು ಸಂಪರ್ಕಿಸಬಹುದು.
ಆಸಕ್ತ ಅಭ್ಯರ್ಥಿಗಳು ನಿಮ್ಮ ಭವಿಷ್ಯ ಕಟ್ಟಲು, ಇಂಟರ್ವ್ಯೂಗಳಿಗಾಗಿ ಈ ಉದ್ಯೋಗ ಮೇಳವನ್ನು ತಪ್ಪದೇ ಭೇಟಿ ನೀಡಿ!
Comments