Loading..!

ಭಾರತೀಯ ರೈಲ್ವೆ ಇಲಾಖೆಯ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಮತ್ತು ಟೆಕ್ನಿಷಿಯನ್ (Technician) ಹುದ್ದೆಗಳ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಪರಿಷ್ಕ್ರತ ಫಲಿತಾಂಶ ಪ್ರಕಟ, ಹೊಸದಾಗಿ 36399 ಅಭ್ಯರ್ಥಿಗಳಿಗೆ ಅವಕಾಶ.
| Date:5 ಜನವರಿ 2019
Image not found
ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ 'ಸಿ' ಯ ಅಸಿಸ್ಟೆಂಟ್ ಲೋಕೋ ಪೈಲಟ್(ALP) ಮತ್ತು ಟೆಕ್ನಿಷಿಯನ್(Technition) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಫಲಿತಾಂಶವನ್ನು ಈಗಾಗಲೇ ಎಲ್ಲ ರೈಲ್ವೆ ನೇಮಕಾತಿ ಮಂಡಳಿ(RRB)ಗಳ ವೆಬ್ ನಲ್ಲಿ ದಿನಾಂಕ 02-11-2018 ರಂದು ಪ್ರಕಟಿಸಲಾಗಿದ್ದು ಇದರ ಜತೆ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಅಭ್ಯರ್ಥಿಗಳು ಬರೆದ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಒದಗಿಸಲಾಗಿತ್ತು. ಆದರೆ ಕೆಲ ಉತ್ತರಗಳು ತಪ್ಪಾಗಿರುವ ಕುರಿತು ಹಾಗೂ ಅನುವಾದ ಸರಿ ಇಲ್ಲದಿರುವ ಬಗ್ಗೆ ಅಭ್ಯರ್ಥಿಗಳು ದೂರಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಫಲಿತಾಂಶ ಪ್ರಕಟಿಸ ಪ್ರಕಟಿಸಲು ರೈಲ್ವೆಯು ನಿರ್ಧರಿಸಿತ್ತು.

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ 'ಸಿ' ಯ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಮತ್ತು ಟೆಕ್ನಿಷಿಯನ್ (Technician) ಹುದ್ದೆಗಳ ನೇಮಕಕ್ಕೆ ನಡೆಸಿದ್ದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾ ಪರಿಷ್ಕೃತ ಫಲಿತಾಂಶವನ್ನು ಈಗ ಪ್ರಕಟಿಸಿದೆ.

ಈ ಮೊದಲು ಬೆಂಗಳೂರು ವಿಭಾಗದಿಂದ ಕೇವಲ 36903 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು ಪ್ರಸ್ತುತ ಪರಿಷ್ಕ್ರತ ಫಲಿತಾಂಶದಲ್ಲಿ ಹೊಸದಾಗಿ 36399 ಅಭ್ಯರ್ಥಿಗಳಿಗೆ ಅವಕಾಶ ಲಭಿಸಿದೆ, ಒಟ್ಟು ಬೆಂಗಳೂರು RRB ಯಿಂದ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ ಈಗ 73302 ಆಗಿದೆ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳು ಉತ್ತಮ ತಯಾರಿ ಆರಂಭಿಸಿ ಪರೀಕ್ಷೆಗೆ ಕೇವಲ ಒಂದು ತಿಂಗಳ ಅವಧಿ ಮಾತ್ರ ಉಳಿದಿದೆ.

ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಅಂಕಗಳನ್ನು ಮತ್ತು 2 ನೇ ಹಂತದ CBT ಯ ಅರ್ಹತಾ ಸ್ಥಿತಿಯನ್ನು ತಿಳಿಯಲು ಆರ್ ಆರ್ ಬಿ (RRB) ಗಳ ಅಧಿಕೃತ ಜಾಲತಾಣದಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನೇರವಾಗಿ ನಮೂದಿಸುವ ಮೂಲಕ ಲಾಗಿನ್ ಆಗಿ ವೀಕ್ಷಿಸಬಹುದು. ನಿಮ್ಮ ಮಾಸ್ಟರ್ question paper ಮತ್ತು ಕೀ ಉತ್ತರಗನ್ನು ಕೂಡ ನೋಡಬಹುದು ಈ ಸೌಕರ್ಯವು ದಿನಾಂಕ 19.01.2019 ವರೆಗೆ ಲಭ್ಯವಿರುತ್ತದೆ.
ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಭ್ಯರ್ಥಿಗಳು ತಮ್ಮ ಪರಿಷ್ಕ್ರತ ಫಲಿತಾಂಶವನ್ನು ನೋಡಬಹುದು
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments