ಕರ್ನಾಟಕ ಸರ್ಕಾರದ ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಬರುವ ತಾಲ್ಲೂಕುಗಳಲ್ಲಿ 2019 ನೇ ಸಾಲಿನ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:June 20, 2019

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹಾಸನ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ 2018 ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ನಂತರ ವಯೋನಿವೃತ್ತಿ, ರಾಜೀನಾಮೆ, ಮುಂಬಡ್ತಿ, ವರ್ಗಾವಣೆ ಇನ್ನಿತರ ಕಾರಣಗಳಿಂದ ತೆರವಾಗಿರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು, ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಾಬೋರ್ಡಿನೇಟ್ ಬ್ರಾಂಚ್ ) (ಕೇಡರ್ ಅಂಡ್ ರೆಕ್ರೂಟ್ಮೆಂಟ್) (ತಿದ್ದುಪಡಿ) ನಿಯಮಗಳು 2008 ಮತ್ತು 2009 ರನ್ವಯ ಮಾಡಲು ಸರ್ಕಾರದ ಆದೇಶಗಳಲ್ಲಿ ಅನುಮೋದನೆ ನೀಡಿರುತ್ತದೆ. ಅದರಂತೆ ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
No. of posts: 21
Comments