ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಭೋದಕ ಹುದ್ದೆಗಳ ನೇಮಕಾತಿ | ನೇರ ಸಂದರ್ಶನ

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿಯ ಸೂಪರ ಸ್ಪೆಷಾಲಿಟಿ ಆಸ್ಪತ್ರೆಗೆ ಹಾಗೂ ಬಿಮ್ಸ್ ಮಹಾವಿದ್ಯಾಲಯದಲ್ಲಿ ಖಾಲಿ ಇರುವ 34 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಸೇರಿದಂತೆ ವಿವಿಧ ಬೋಧಕ ಹುದ್ದೆಗಳನ್ನು ನೇಮಕಮಾಡಲು ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳಲಾಗುತ್ತದೆ.
ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಅವಶ್ಯಕ ದೃಢೀಕರಿತ ದಾಖಲಾತಿಗಳೊಂದಿಗೆ ನಿರ್ದೇಶಕರು ಬಿಮ್ಸ್ ಬೆಳಗಾವಿ ಇವರ ಹೆಸರಿನಲ್ಲಿ ರೂ. 500/-ಮೊತ್ತದ ಡಿ.ಡಿ.ಯನ್ನು ಮುಖ್ಯ ಆಡಳಿತಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳು ನೇಮಕಾತಿ ಸಮಿತಿ ಜಿಮ್ಸ್ ಬೆಳಗಾವಿ 590 001. ಇವರಿಗೆ 11-02-2025 ಸಂಜೆ 5.30 ಘಂಟೆಯ ಒಳಗಾಗಿ ಅಂಚೆಯ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅವಧಿ ಮೀರಿ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಅಂಗೀಕರಿಸಲಾಗುವುದಿಲ್ಲ.
ಮೇಲ್ಕಾಣಿಸಿದಂತೆ ಅರ್ಜಿಗಳನ್ನು ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ನಿರ್ದೇಶಕರು, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, - 590 001 ಇಲ್ಲಿ ದಿನಾಂಕ 13-02-2025 ರ ಬೆಳ್ಳಿಗೆ 10.00 ರಿಂದ 11.00 ಘಂಟೆಯೊಳಗಾಗಿ ಸಮಿತಿ ಮುಂದೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಗೂ ಅವುಗಳ 1 ಸೆಟ್ ದೃಢೀಕರಿತ ಪ್ರತಿಗಳೊಂದಿಗೆ ಮತ್ತು 2 ಪಾಸಪೋರ್ಟ್ ಅಳತೆಯ ಭಾವ ಚಿತ್ರಗಳೊಂದಿಗೆ ಪರಿಶೀಲನೆಗಾಗಿ ವರದಿ ಮಾಡಿಕೊಂಡು ತದನಂತರ ಸದರಿ ದಿನದಂದೇ ಸಂದರ್ಶನಕ್ಕಾಗಿ ನೇಮಕಾತಿ ಸಮಿತಿಯ ಮುಂದೆ ಹಾಜರಾಗಬೇಕಾಗಿರುತ್ತದೆ. ಯಾವುದೇ ಭತ್ಯೆ ನೀಡಲಾಗುವುದಿಲ್ಲ.
ಮಾಸಿಕ ವೇತನ :
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಿಮ್ಸ್ ಬೆಳಗಾವಿ :
- ಪ್ರಾಧ್ಯಾಪಕ (Professor) : ₹1,40,000/-
- ಸಹಾಯಕ ಪ್ರಾಧ್ಯಾಪಕ (Associate Professor) : ₹1,20,000/-
- ಸಹಾಯಕ ಪ್ರಾಧ್ಯಾಪಕ (Assistant Professor) : ₹1,00,000/-
ಬಿಮ್ಸ್ ಮಹಾವಿದ್ಯಾಲಯ ಬೆಳಗಾವಿ :
- ಸಹಾಯಕ ಪ್ರಾಧ್ಯಾಪಕ (Associate Professor) : ₹90,000/-
- ಸಹಾಯಕ ಪ್ರಾಧ್ಯಾಪಕ (Assistant Professor) : ₹81,250/-
ಹುದ್ದೆಗಳ ವಿವರ : 34
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಿಮ್ಸ್ ಬೆಳಗಾವಿ :
ಪ್ರಾಧ್ಯಾಪಕ (Professor) : 3
ಸಹಾಯಕ ಪ್ರಾಧ್ಯಾಪಕ (Associate Professor) : 7
ಸಹಾಯಕ ಪ್ರಾಧ್ಯಾಪಕ (Assistant Professor) : 4
ಬಿಮ್ಸ್ ಮಹಾವಿದ್ಯಾಲಯ ಬೆಳಗಾವಿ :
ಸಹಾಯಕ ಪ್ರಾಧ್ಯಾಪಕ (Associate Professor) : 8
ಸಹಾಯಕ ಪ್ರಾಧ್ಯಾಪಕ (Assistant Professor) : 12
Comments