Loading..!

ತುಮಕೂರು ಜಿಲ್ಲಾ ಪಾಂಚಾಯಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:March 6, 2025
Image not found

ತುಮಕೂರು ಜಿಲ್ಲಾ ಪಂಚಾಯತ್ ಇಲಾಖೆ 2025ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 09 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ :
ತಜ್ಞ ವೈದ್ಯರು - 3              
ಕ್ಷಾರಸೂತ್ರ ಅಟೆಂಡರ್ -  1              
ಔಷಧಿಕಾರ  -  4              
ಮಸಾಜಿಸ್ಟ್ - 1              


ವಿದ್ಯಾರ್ಹತೆ :
- ತಜ್ಞ ವೈದ್ಯರು : ಅಭ್ಯರ್ಥಿಗಳು BAMS, BHMS, MD, MS ಅಥವಾ ಸಮಾನವಾದ ಸ್ನಾತಕೋತ್ತರ ಪದವಿ ಹೊಂದಿರಬೇಕು.
- ಕ್ಷಾರಸೂತ್ರ ಅಟೆಂಡರ್ : ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.
- ಔಷಧಿಕಾರ : ಅಭ್ಯರ್ಥಿಗಳು D.Pharm ಅಥವಾ B.Pharm ಪದವಿ ಹೊಂದಿರಬೇಕು.
- ಮಸಾಜಿಸ್ಟ್ : ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.


ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು. ವಿಶೇಷ ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಸಡಿಲಿಕೆ ಲಭ್ಯವಿದೆ.


ವೇತನ ಶ್ರೇಣಿ :
- ತಜ್ಞ ವೈದ್ಯರು : ರೂ. 57,550/-
- ಕ್ಷಾರಸೂತ್ರ ಅಟೆಂಡರ್ : ರೂ. 18,500/-
- ಔಷಧಿಕಾರ : ರೂ. 27,550/-
- ಮಸಾಜಿಸ್ಟ್ : ರೂ. 18,500/-


ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.


ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಪಂಚಾಯತ್ ತುಮಕೂರು, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಬಿ.ಹೆಚ್ ರಸ್ತೆ, ತುಮಕೂರು, ಕರ್ನಾಟಕ


ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-ಫೆಬ್ರವರಿ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-ಮಾರ್ಚ್-2025


ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, ದಯವಿಟ್ಟು ತುಮಕೂರು ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್‌ ನೋಡಿ:

Comments