Loading..!

ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ 39,481 ಕಾನ್‌ಸ್ಟೆಬಲ್(GD) ಹುದ್ದೆಗಳ ಪರೀಕ್ಷೆಯ ಕೀ ಉತ್ತರಗಳು ಇದೀಗ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by: Yallamma G | Date:March 5, 2025
Image not found

ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು 2024-2025 ನೇ ಸಾಲಿನ ಕಾನ್‌ಸ್ಟೆಬಲ್ (GD) 39,481 ಹುದ್ದೆಗಳ ನೇಮಕಾತಿಗಾಗಿ 09/05/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


   ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗಳ ಮೊದಲ ಹಂತವಾದ ಪರೀಕ್ಷೆಯನ್ನು 2025 ಫೆಬ್ರುವರಿ -04 ರಿಂದ ಫೆಬ್ರುವರಿ -25 ರ ವರೆಗೆ ಯಶಸ್ವಿಯಾಗಿ ನಡೆಸಲಾಗಿದ್ದು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.


                   ಅಭ್ಯರ್ಥಿಗಳು ಕೀ ಉತ್ತರಗಳನ್ನು ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬಹುದು. ಪ್ರಕಟಿಸಲಾದ ಸರಿ ಉತ್ತರಗಳಿಗೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 04/03/2025 ರಿಂದ 09/03/2025 ರಂದು ಸಂಜೆ 06:00 ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಶ್ನೆಗೆ ಆಕ್ಷೇಪಣೆಯನ್ನು ಸಲ್ಲಿಸಲು₹100 ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನೂ ಪರಿಗಣಿಸಲಾಗುವುದಿಲ್ಲ.

Comments