Loading..!

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(SSC)ದಿಂದ 17727 ಹುದ್ದೆಗಳ ನೇಮಕಾತಿ ನವೀಕರಣ- ಈ ಕುರಿತು ಮಾಹಿತಿ ನಿಮಗಾಗಿ
Published by: Bhagya R K | Date:Feb. 28, 2025
Image not found

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 24/06/2024 ರಂದು 17727 Combined Graduate Level (CGL) (Group- B & C ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು 2024 ಸೆಪ್ಟೆಂಬರ್-9 ರಿಂದ 2024 ಸೆಪ್ಟೆಂಬರ್ 26 ರ ವರೆಗೆ ನಡೆಸಲಾಗಿತ್ತು.


ಅದರಂತೆ ವಿವಿಧ ಇಲಾಖೆ, ಸಚಿವಾಲಯಗಳಲ್ಲಿ ಒಟ್ಟು 18,174 ಹುದ್ದೆಗಳು ನಿಯೋಜನೆಗೆ ಲಭ್ಯವಿವೆ ಎಂದು ತಿಳಿಸಲಾಗಿದೆ. 
ಹುದ್ದೆಗಳ ವಿಭಾಗಾನುಸಾರ ವಿವರ :
🔹 ಸಾಮಾನ್ಯ ವರ್ಗ (UR): 7,567  
🔹 ಎಸ್‌ಸಿ (SC) : 2,762  
🔹 ಎಸ್‌ಟಿ (ST) : 1,606  
🔹 ಒಬಿಸಿ (OBC) : 4,521  
🔹 ಆರ್ಥಿಕ ದುರ್ಬಲ ವರ್ಗ (EWS) : 1,718  


 ಈ ಹುದ್ದೆಗಳಿಗಾಗಿ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳ ನೇಮಕಾತಿ ನಡೆಯಲಿದೆ. ಅಸಿಸ್ಟೆಂಟ್, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಅಕೌಂಟೆಂಟ್, ಆಡಿಯಿಟರ್, ಕ್ಲರ್ಕ್ ಹಾಗೂ ಸೇಕ್ರೆಟೇರಿಯಲ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.  


ಹೆಚ್ಚಿನ ಮಾಹಿತಿಗಾಗಿ ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ಸಂದರ್ಶಿಸಲು ಸಲಹೆ ನೀಡಲಾಗಿದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಲಾಭಪಡಿಸಿಕೊಳ್ಳಬಹುದು.

Comments