ಕರ್ನಾಟಕ ಲೋಕಸೇವಾ ಆಯೋಗವು 2024-25 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ (KAS) ಗ್ರೂಪ್ - 'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗಾಗಿ 26/02/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನೇಮಕಾತಿಯ ಮುಂದಿನ ಹಂತವಾದ ಪೂರ್ವಭಾವಿ ಪರೀಕ್ಷೆಯನ್ನು 2024 ಆಗಸ್ಟ್ 27 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು ಆದರೆ ಪರೀಕ್ಷೆಯಲ್ಲಿ ಕನ್ನಡ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿರುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾದಕಾರಣ KPSCಯು ದಿನಾಂಕ ಡಿಸೆಂಬರ್ 29 ರಂದು ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ನಡೆಸಲಿದೆ.
ಇದೀಗ KPSC ಯು ಮುಖ್ಯ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಿದೆ. 2025ರ ಮಾರ್ಚ್ 28, 29, ಏಪ್ರಿಲ್ 1 ಮತ್ತು 2 ರಂದು ಮುಖ್ಯ ಪರೀಕ್ಷೆಯನ್ನು ನಡೆಸಲು KPSC ಯು ನಿರ್ಧರಿಸಿದೆ. ಈ ಕುರಿತು KPSC ಕಾರ್ಯದರ್ಶಿ ರಮಣದೀಪ್ ಚೌಧರಿ ಅವರು ಪ್ರಕಟಣೆಯನ್ನು ಹೊರಡಿಸಿದ್ದಾರೆ.
- ಈ ಕುರಿತ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ KPSC ಜಾಲತಾಣದಲ್ಲಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...
Comments