Loading..!

KPSC ಯಿಂದ ವಿವಿಧ ಇಲಾಖೆಗಳಲ್ಲಿನ ಗ್ರೋಪ್-ಸಿ ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
Published by: Yallamma G | Date:July 24, 2024
Image not found

ಕರ್ನಾಟಕ ಲೋಕಸೇವಾ ಆಯೋಗದಿಂದ 15-03-2024 ರಂದು ವಿವಿಧ ಇಲಾಖೆಗಳಲ್ಲಿನ ವಿವಿಧ ಗ್ರೂಪ್ 'ಸಿ' 60 + 16 (ಹೈಕ) ಹುದ್ದೆಗಳನ್ನು ವೃಂದವಾರು ಪ್ರತ್ಯೇಕವಾಗಿ ಅಧಿಸೂಚಿಸಿ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಅಧಿಸೂಚನೆಗಳಲ್ಲಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ 50 + 13(ಹೈಕ) ಹುದ್ದೆಗಳಿಗೆ ಇಲಾಖೆಯ ಪ್ರಸ್ತಾವನೆಯಂತೆ ನಿಗದಿಪಡಿಸಲಾಗಿದ್ದ ವಿದ್ಯಾರ್ಹತೆಯ ಕೋರ್ಸ್‌ಗಳಲ್ಲಿ B.Com, B.Sc., BBA, BE ಪದವಿಗಳನ್ನು ಮಾತ್ರ ಪರಿಗಣಿಸಿ, ಅರ್ಜಿ ಸಲ್ಲಿಸಲು ದಿ:29-04-2024 ರಿಂದ 10-06-2024 ರವರೆಗೆ ಅವಕಾಶ ನೀಡಲಾಗಿತ್ತು. ಪ್ರಸ್ತುತ ಸರ್ಕಾರದ ಪತ್ರ ದಿನಾಂಕ: 20-06-2024 ರಲ್ಲಿ ಸದರಿ ಹುದ್ದೆಗಳಿಗೆ BBM ಮತ್ತು B.Tech ಪದವಿಗಳನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಲಾಗಿರುತ್ತದೆ.
- ಕೋರಿಕೆಯ ಮೇರೆಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲಿನ ಕೈಗಾರಿಕಾ ವಿಸ್ತರಣಾಧಿಕಾರಿ 50+13(ಹೈಕ) ಹುದ್ದೆಗಳಿಗೆ BBM ಮತ್ತು B.Tech ಪದವಿಗಳನ್ನು ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಲಾಗಿದೆ. 
ಅರ್ಜಿ ಸಲ್ಲಿಸಲು ವಿಸ್ತರಿಸಿದ ಕೊನೆಯ ದಿನಾಂಕ 01-08-2024
ಶುಲ್ಕ ಪಾವತಿಸಲು ವಿಸ್ತರಿಸಿದ ಕೊನೆಯ ದಿನಾಂಕ 01-08-2024
ದಿನಾಂಕ:15-03-2024ರ ಅಧಿಸೂಚನೆಗಳಲ್ಲಿನ ಇತರೆ ಷರತ್ತು/ಸೂಚನೆಗಳಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.


- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯ ಮೂಲಕ ಈ ಕುರಿತು ಹೆಚ್ಚಿನ  ಮಾಹಿತಿ ಪಡೆಯಬಹುದಾಗಿದೆ. 

Comments

User July 24, 2024, 7:32 p.m.
User July 27, 2024, 3:36 p.m.