Loading..!

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ಪಿಯು ಉಪನ್ಯಾಸಕರ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟ
| Date:Aug. 23, 2019
Image not found
ಕರ್ನಾಟಕ ರಾಜ್ಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ 2015 ರ ಮೇನಲ್ಲಿ ಹೊರಡಿಸಿದ್ದ ಅಧಿಸೂಚನೆಗೆ ಸಂಬಂಧಿಸಿದಂತೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೆ ಆಗಸ್ಟ್ 26 ರಂದು ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಈ ಪ್ರಕಟಣೆಯಂತೆ ಆಯ್ಕೆ ಪಟ್ಟಿ ಪ್ರಕಟವಾದಲ್ಲಿ ಅಧಿಸೂಚನೆ ಪ್ರಕಟಗೊಂಡ ನಾಲ್ಕು ವರ್ಷ ಮೂರು ತಿಂಗಳ ನಂತರ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದಂತಾಗಲಿದೆ.
ಒಟ್ಟು 1,193 ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು ಮತ್ತು 68054 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ನೇಮಕ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಹತಾಶೆಗೊಂಡಿದ್ದರು, ಕಳೆದ ನವೆಂಬರ್ ನಿಂದ ಈ ನೇಮಕ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದ್ದ KEA ನವೆಂಬರ್ 29ರಿಂದ ಲಿಖಿತ ಪರೀಕ್ಷೆ ನಡೆಸಿತ್ತು ನಂತರ ಕಳೆದ ಮೇ 04 ಅಂತಿಮ ಕೀ ಉತ್ತರ ಪ್ರಕಟಿಸಿತ್ತು ಮತ್ತು ಜೂನ್ ನಲ್ಲಿ 1:2 ಅನುಪಾತ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಜುಲೈ 17 ರಿಂದ ದಾಖಲೆ ಪರಿಶೀಲನೆ ನಡೆಸಲಾಗಿತ್ತು ದಾಖಲೆ ಪರಿಶೀಲನೆ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಎರಡು ಬಾರಿ ಅಧಿಸೂಚನೆ ಒಂದು ಬಾರಿ ತಿದ್ದುಪಡಿ ಅಧಿಸೂಚನೆ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ ವಿಷಯಗಳನ್ನು ಕೈಬಿಟ್ಟಿದ್ದು ಹೀಗೆ ಹಲವಾರು ಏಳು ಬೀಳುಗಳನ್ನು ಕಂಡಿದ್ದು ಈ ನೇಮಕ ಪ್ರಕ್ರಿಯೆಯೂ ಈಗ ಅಂತ ಅಂತಿಮ ಹಂತಕ್ಕೆ ಬಂದಿರುವುದಕ್ಕೆ ಅಭ್ಯರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ಇತಿಹಾಸದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments