Loading..!

ಒಟ್ಟು 10611 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರುಗಳ (GPSTR) ನೇಮಕಾತಿಯ 2019-20 ನೇ ಸಾಲಿನ ಫಲಿತಾಂಶ ಪ್ರಕಟ
| Date:Sept. 8, 2019
Image not found
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು 2019-20 ನೇ ಸಾಲಿನಲ್ಲಿ ರಾಜ್ಯದ ರಾಜ್ಯದಲ್ಲಿನ ಒಟ್ಟು 10611 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಗಣಿತ, ವಿಜ್ಞಾನ, ಆಂಗ್ಲ ಭಾಷೆ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ) ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರದ ಅಧಿಸೂಚನೆಯನ್ನು ಪ್ರಕಟಿಸಿತ್ತು. ದಿನಾಂಕ 22-08-2018 ಹಾಗೂ ತಿದ್ದುಪಡಿ ಅಧಿಸೂಚನೆ 22-02-2019 ರಂದು ಪ್ರಕಟಿಸಿತ್ತು.

ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 01-06-2019 ಹಾಗೂ 02-06-2019 ರಂದು ಎರಡು ಹಂತಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಯಿತು, ಈ ಪರೀಕ್ಷೆಗೆ ಹೈದರಾಬಾದ್ ಕರ್ನಾಟಕದ 11,677 ಅಭ್ಯರ್ಥಿಗಳು ಹಾಗೂ ಇತರೆ ಜಿಲ್ಲೆಗಳ 40,211 ಅಭ್ಯರ್ಥಿಗಳು ಸೇರಿ ಒಟ್ಟು 51,888 ಅಭ್ಯರ್ಥಿಗಳು ಪರೀಕ್ಷೆ ಬರೆದಿರುತ್ತಾರೆ.

ಈ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳ ವಿವರಣಾತ್ಮಕ ಹಾಗೂ ಬಹು ಆಯ್ಕೆ ಪ್ರಶ್ನೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಪಡೆದ ಅಂಕಗಳ ವಿವರಗಳನ್ನು ದಿನಾಂಕ 07-09-2019 ರಂದು ಇಲಾಖಾ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಲಾಖಾ ಜಾಲತಾಣ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿದಲ್ಲಿ ಅವರ ಅಂಕಗಳ ವಿವರವನ್ನು ವೀಕ್ಷಿಸಬಹುದಾಗಿದೆ.

** ಸಿಇಟಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹೊರತುಪಡಿಸಿ ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿ ಅಂದರೆ ಹೆಸರಿನಲ್ಲಿ ಕಾಗುಣಿತ ದೋಷ, ಜನ್ಮದಿನಾಂಕ, ಪದವಿ, ಬಿಇಡಿ, ಡಿಇಡಿ, ಟಿಇಟಿ ಅಂಕಗಳಲ್ಲಿ ಬದಲಾವಣೆಗೆ
ಕೇಂದ್ರೀಕೃತ ದಾಖಲಾತಿ ಘಟಕ, ಕೆಜಿ ರಸ್ತೆ, ಬೆಂಗಳೂರು
ಇಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ದಿನಾಂಕ 09-09-2019 ರಿಂದ 16-09-2019 ರವರೆಗೆ ಈ ಅವಕಾಶ ನೀಡಲಾಗಿದ್ದು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments