Loading..!

ಕೇಂದ್ರ ಸರ್ಕಾರದಿಂದ 60,000 ಹುದ್ದೆಗಳ ನೇಮಕಕ್ಕೆ ಶೀಘ್ರದಲ್ಲೇ ಅಧಿಸೂಚನೆ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:Oct. 1, 2024
Image not found
ಇದೀಗ ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ 8000ಕ್ಕೂ ಹೆಚ್ಚು ಜೂನಿಯರ್ ಅಸೋಸಿಯೇಟ್‌ಗಳ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವುದು ಬಾಕಿಯಿದೆ, ಮುಂಬರುವ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಈ ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.

ಭಾರತೀಯ ರೈಲ್ವೆಯಿಂದಲೂ ಇನ್ನೊಂದು ಬೃಹತ್ ನೇಮಕಾತಿಗೆ ಚಾಲನೆ ಸಿಗಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. 2024-25ನೇ ಸಾಲಿಗೆ ದೇಶದಾದ್ಯಂತ 40,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ವರ್ಷ ವೇಳಾಪಟ್ಟಿ ಪ್ರಕಾರ ಅಕ್ಟೋಬರ್-ನವೆಂಬರ್‌ನಲ್ಲಿ ಆರ್‌ಆರ್‌ಬಿ ಅಧಿಸೂಚನೆ ಹೊರಡಿಸಲಿದೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಸಿಸ್ಟೆಂಟ್ ಹುದ್ದೆಗಳಿಗೂ ಈ ವರ್ಷದ ಅಂತ್ಯದೊಳಗೆ ಅಧಿಸೂಚನೆ ಪ್ರಕಟವಾಗಲಿದೆ. ಎಲ್‌ಐಸಿ ಅಸಿಸ್ಟೆಂಟ್ ಹುದ್ದೆಗಳಿಗೂ ನೇಮಕ ಬಾಕಿಯಿದೆ. ಎಲ್‌ಐಸಿಯಲ್ಲಿ ಒಟ್ಟು ಐದು ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಇಎಸ್‌ಐಸಿ ಕ್ಲರ್ಕ್ ಹುದ್ದೆಗಳೂ ಖಾಲಿ ಇವೆ. ಈ ವರ್ಷದ ಅಂತ್ಯದೊಳಗೆ ಈ ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, 2024-25ನೇ ಸಾಲಿಗೆ ಸುಮಾರು 60,000ಕ್ಕೂ ಹೆಚ್ಚು ಹುದ್ದೆಗಳು ಇನ್ನಷ್ಟೇ ಭರ್ತಿಯಾಗಬೇಕಿದೆ.

Comments