Loading..!

RRB ಜೂನಿಯರ್ ಇಂಜಿನಿಯರ್(JE) ನೇಮಕಾತಿಯ ಮರುಪರೀಕ್ಷೆ ಜೂನ್ 26 ರಂದು ನಿಗದಿಪಡಿಸಲಾಗಿದೆ ಈ ಕುರಿತ ಮಾಹಿತಿ ನಿಮಗಾಗಿ
| Date:June 17, 2019
Image not found
ಭಾರತೀಯ ರೈಲ್ವೆಯು ಜೂನಿಯರ್ ಇಂಜಿನಿಯರ್(JE) ನೇಮಕಕ್ಕೆ ಸಂಬಂಧಪಟ್ಟಂತೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು(ಸಿಬಿಟಿ) ಜೂನ್ 26 ರಿಂದ ಜೂನ್ 28ರ ತನಕ ಮರು ನಿಗದಿ ಮಾಡಿದೆ.
ಜೂನ್ 16ರಿಂದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಮತ್ತು ದಿನಾಂಕಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ನೋಡಬಹುದು ಮತ್ತು ಪರೀಕ್ಷೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಲು ಮಾಕ್ ಟೆಸ್ಟ್(mock test) ಲಿಂಕ್ ಅನ್ನುಆರ್ ಆರ್ ಬಿ ಗಳ ವೆಬ್ ಸೈಟ್ ನಲ್ಲಿ ಒದಗಿಸಲಾಗುವುದು. ಪರೀಕ್ಷೆಗೆ 4 ದಿನ ಮುಂಚಿತವಾಗಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಆರ್ ಆರ್ ಬಿ ಪ್ರಕಟಣೆ ಹೊರಡಿಸಿದೆ.
ಈ ಹಿಂದೆ ಮೇ 30 ರಂದು ಸಿಬಿಟಿ ನಡೆದಿದ್ದು, ಪರೀಕ್ಷೆ ಸಂದರ್ಭದಲ್ಲಿ ಹಲವು ಬಾರಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಅಭ್ಯರ್ಥಿಗಳು ತೊಂದರೆಗೊಳಗಾಗಿದ್ದರು. ಆನ್ ಲೈನ್ ಪರೀಕ್ಷೆ ಆಗಿದ್ದರಿಂದ ವೇಗವಾದ ಸೇವೆ ನೀಡುವ ಸರ್ವರ್ ಮತ್ತು ನಿರಂತರ ವಿದ್ಯುತ್ ಪೂರೈಕೆಯ ಅಗತ್ಯವಿತ್ತು. ಆದರೆ ವಿದ್ಯುತ್ ಸ್ಥಗಿತಗೊಂಡು ಅಭ್ಯರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು.ಒಟ್ಟು 13487 ಜೂನಿಯರ್ ಇಂಜಿನಿಯರ್ ಗಳ ನೇಮಕ ನಡೆಯಲಿದ್ದು, ಬೆಂಗಳೂರು ಆರ್ ಆರ್ ಬಿ ಮೂಲ 708 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ದಿನಾಂಕ 16-06-2019 ರಿಂದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ದಿನಾಂಕವನ್ನು RRB ಯಾ ಜಾಲತಾಣದಿಂದ ಪಡೆಯಬಹುದು ಈ ಲಿಂಕ್ ಅನ್ನು ಈ ಕೆಳೆಗೆ ನೀಡ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments