* ರಿಲಯನ್ಸ್ ಜಿಯೋ ತನ್ನ 5 ಜಿ ಸೇವೆಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ನಲ್ಲಿ ಪ್ರಾರಂಭಿಸಿದೆ.* ಸಿಯಾಚಿನ್ ಹಿಮನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಇದೀಗ ಪಾತ್ರವಾಗಿದೆ. ಹಿಮಾಲಯದ ಕಾರಕೋರಂ ಶ್ರೇಣಿಯಲ್ಲಿ 16,000 ಅಡಿ ಎತ್ತರದಲ್ಲಿ ಈ 5ಜಿ ಸಂಪರ್ಕ ಸಾಧ್ಯವಾಗಿದೆ.* ರಿಲಯನ್ಸ್ ಜಿಯೊ, ಫಾರ್ವರ್ಡ್ ಪೋಸ್ಟ್ನಲ್ಲಿ ಪ್ಲಗ್ ಆ್ಯಂಡ್ ಪ್ಲೇ ಸಾಧನ ಬಳಸಿ 5ಜಿ ಸೇವೆ ನೀಡಿದೆ.* ಜನವರಿ 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್ನಲ್ಲಿ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ.* 'ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದ ನಮ್ಮ ಧೈರ್ಯಶಾಲಿ ಸೈನಿಕರಿಗೆ ಈ ಸಾಧನೆಯನ್ನು ಅರ್ಪಿಸಲಾಗಿದೆ' ಎಂದು ಸೇನೆ ತಿಳಿಸಿದೆ.* ಸೇನಾ ಸಿಗ್ನಲರ್ಸ್ಗಳ ಸಹಾಯದಿಂದ ಕಠಿಣ ಪ್ರದೇಶದಲ್ಲೂ ನೆಟ್ವರ್ಕ್ ಪೂರೈಸುವಲ್ಲಿ ರಿಲಾಯನ್ಸ್ ಜಿಯೊ ಯಶಸ್ವಿಯಾಗಿದೆ ಎಂದು ಟೆಲಿಕಾಮ್ ಕಂಪನಿಯ ವಕ್ತಾರರು ಹೇಳಿದ್ದಾರೆ.