* ಕೆ.ವಿ.ನಾರಾಯಣ ಅವರ 'ನುಡಿಗಳ ಅಳಿವು' ಎಂಬ ಸಾಹಿತ್ಯ ವಿಮರ್ಶೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ₹1 ಲಕ್ಷ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.* ನವದೆಹಲಿಯಲ್ಲಿ ಮಾರ್ಚ್ 8ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೆ.ವಿ.ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.* ಉರ್ದು, ಡೋಗ್ರಿ ಹಾಗೂ ಬಂಗಾಳಿ ಭಾಷೆಯ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.* ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಹಳೆಮನಿ ರಾಜಶೇಖರ್ ಮತ್ತು ಡಾ.ಸರೂಜ್ ಕಾಟ್ಕರ್ ಇದ್ದರು.* ಒಟ್ಟಾರೆ 8 ಕವನ ಸಂಕಲನಗಳು, 3 ಕಾದಂಬರಿಗಳು, 2 ಸಣ್ಣ ಕಥೆಗಳು, 3 ಪ್ರಬಂಧಗಳು, 3 ಸಾಹಿತ್ಯ ವಿಮರ್ಶೆ, 1 ನಾಟಕ ಮತ್ತು 1 ಸಂಶೋಧನೆಗೆ ಪ್ರಶಸ್ತಿಗಳು ಲಭ್ಯವಾಗಿವೆ.* ಪ್ರಶಸ್ತಿಗೆ ಭಾಜನರಾದವರಲ್ಲಿ ಹಿಂದಿ ಕವಿ ಗಗನ್ ಗಿಲ್, ಇಂಗ್ಲಿಷ್ ಲೇಖಕ ಈಸ್ಟರಿನ್ ಕೈರ್, ಮಲಯಾಳಂನ ಕೆ. ಜಯಕುಮಾರ್, ದೀಪಕ್ ಕುಮಾರ್ ಶರ್ಮಾ(ಸಂಸ್ಕೃತ), ಮುಕೇಶ್ ಥಾಲಿ(ಕೊಂಕಣಿ), ಎ.ಆರ್. ವೆಂಕಟಾಚಲಪತಿ(ತಮಿಳು) ಪ್ರಮುಖರು.