* ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರ ಯೋಜನೆಯು ಸುರಕ್ಷತೆ ನಿರ್ವಹಣೆಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಸಿಕ್ಕಿದೆ. ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ಅಯೋಧ್ಯೆಯಲ್ಲಿರುವ ರಾಮಮಂದಿರ ಪಡೆದುಕೊಂಡಿದೆ. * ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಈ ಘೋಷಣೆ ಮಾಡಿದ್ದಾರೆ. ಈ ಪ್ರಶಸ್ತಿಯು ನಿಖರವಾದ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಜಾಗತಿಕ ಸುರಕ್ಷತಾ ಮಾನದಂಡಗಳ ಅನುಸರಣೆಗೆ ಸಾಕ್ಷಿಯಾಗಿದೆ, ಇದು ವಿಶ್ವಾದ್ಯಂತ ನಿರ್ಮಾಣ ಯೋಜನೆಗಳಿಗೆ ಮಾದರಿಯಾಗಿದೆ.* ಸ್ವೋರ್ಡ್ ಆಫ್ ಆನರ್ ಪ್ರಶಸ್ತಿಯನ್ನು ಬ್ರಿಟಿಷ್ ಸುರಕ್ಷತಾ ಸಮಿತಿ ನೀಡುತ್ತದೆ. ಈ ಪ್ರಶಸ್ತಿ ಪಡೆಯಲು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ‘5 ಸ್ಟಾರ್ ’ಪಡೆಯುವುದು ಅಗತ್ಯವಾಗಿದೆ.* ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಯೋಜನೆಯು ಸಾಧಿಸಿದ ಹೊಸ ಮೈಲಿಗಲ್ಲಿನ ಕುರಿತು ವ್ಯಕ್ತಪಡಿಸಿದರು.* ಲಾರ್ಸೆನ್ ಆಂಡ್ ಟರ್ಬೊ ಕಂಪನಿ ದೇವಾಲಯ ನಿರ್ಮಾಣ ಹೊಣೆ ಹೊತ್ತಿತ್ತು. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಗೊಂಡ ಸುರಕ್ಷಾ ಕ್ರಮದ ಹಿನ್ನೆಲೆಯಲ್ಲಿ ಎಲ್ & ಟಿ ಸಂಸ್ಥೆಗೂ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಗೋಲ್ಡನ್ ಟ್ರೋಫಿ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಪ್ರಕಟನೆ ತಿಳಿಸಿದೆ.* ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಪ್ರಕ್ರಿಯೆ, ಅಭ್ಯಾಸಗಳು ಮತ್ತು ಅಂತಿಮವಾಗಿ ಆನ್-ಸೈಟ್ ಚಟುವಟಿಕೆಯ ಮೌಲ್ಯಮಾಪನಗಳ ಆಡಿಟ್ ಮತ್ತು ಪಂಚತಾರಾ ಮೌಲ್ಯಮಾಪನವನ್ನು ನಡೆಸಿ, ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿ ಸ್ಪರ್ಧೆಯಲ್ಲಿ ಗೆದಿದ್ದೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.* ರಾಮ ಮಂದಿರ ನಿರ್ಮಾಣದ ಹೊಣೆಗಾರಿಕೆಯನ್ನು ನಿರ್ವಹಿಸಿದ್ದ ಬಹುರಾಷ್ಟ್ರೀಯ ಕಂಪನಿಯಾದ ಲಾರ್ಸೆನ್ ಮತ್ತು ಟೂಬ್ರೊಗೆ ರಾಮ ಮಂದಿರ ನಿರ್ಮಾಣದಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳಿಗಾಗಿ ಭಾರತದ ರಾಷ್ಟ್ರೀಯ ಸುರಕ್ಷತಾ ಮಂಡಳಿಯಿಂದ ‘ಗೋಲ್ಡನ್ ಟ್ರೋಫಿ’ ನೀಡಲಾಯಿತು ಎಂದು ತಿಳಿಸಲಾಗಿದೆ.