* ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ನ ಅಧ್ಯಕ್ಷ ವೊಲೊದಿಮಿರ್ ಝಲೆನ್ಸ್ಕಿ ನಡುವಿನ ಶುಕ್ರವಾರ(ಫೆ.28)ದ ಚರ್ಚೆ ವಾಕ್ಸಮರಕ್ಕೆ ತಿರುಗಿತು.* ಉಕ್ರೇನ್-ರಷ್ಯಾ ಯುದ್ಧ ಹಾಗೂ ಅಮೆರಿಕದ ಪ್ರಭಾವದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದ್ದು, ಉಭಯ ನಾಯಕರು 45 ನಿಮಿಷ ಚರ್ಚೆ ನಡೆಸಿದರು.* ಉಕ್ರೇನ್-ರಷ್ಯಾ ಯುದ್ಧ ಮತ್ತು ಅಮೆರಿಕದ ಪ್ರಭಾವದ ಹಿನ್ನೆಲೆಯಲ್ಲಿ ಈ ಮಹತ್ವದ ಭೇಟಿ 45 ನಿಮಿಷ ನಡೆಯಿತು.• ಯುದ್ಧದ ಸಂದರ್ಭಗಳಲ್ಲೂ ನಿಯಮಗಳು ಇರುತ್ತವೆ. ಯುದ್ಧಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರಷ್ಯಾ ಉಲ್ಲಂಘಿಸಿದೆ. ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಭಯೋತ್ಪಾದಕ. ಕೊಲೆಗಡುಕನ ಜತೆ ರಾಜಿಯಾಗಬಾರದು.• ಉಕ್ರೇನ್ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ ಒಪ್ಪಂದಕ್ಕೆ ಪ್ರತಿಯಾಗಿ ರಷ್ಯಾದ ಅತಿಕ್ರಮಣ ವಿರುದ್ಧ ಉಕ್ರೇನ್ಗೆ ಭದ್ರತೆಗೆ ಸ್ಪಷ್ಟ ಭರವಸೆ ನೀಡಬೇಕು ಝಿಲೆನ್ಸ್ಕಿ ಆಗ್ರಹಿಸಿದರು.• ನೀವು (ಝಲೆನ್ಸ್ಕಿ) ಲಕ್ಷಾಂತರ ಜನರ ಜೀವನದ ಜತೆ ಹಾಗೂ 3ನೇ ಜಾಗತಿಕ ಸಮರಕ್ಕೆ ಆಸ್ಪದವಾಗುವಂತೆ ಆಟವಾಡುತ್ತಿದ್ದೀರಿ. ಈ ನಡೆ ನಿಮ್ಮ ದೇಶ ಹಾಗೂ ನಿಮಗೆ ಬೆಂಬಲಿಸಿದ್ದ ಅಮೆರಿಕಕ್ಕೆ ತೋರುತ್ತಿರುವ ಅಗೌರವವಾಗಿದೆ• ನಿಮ್ಮ ನಡೆಯು ಕೃತಜ್ಞತಾ ಪೂರಕವಾಗಿಲ್ಲ. ಒಮ್ಮೆ ಒಪ್ಪಂದ ಆದ ಬಳಿಕ ಯುದ್ಧ, ಅತಿಕ್ರಮಣದ ಸಾಧ್ಯತೆಗಳು ಇಲ್ಲ. ನಿಮಗೆ ನ್ಯಾಯಯುತ ಅನ್ನಿಸುವ ಪ್ರಸ್ತಾಪಗಳಿವೆ. ಅದು, ಅಮೆರಿಕ ನೀಡಲಿರುವ ಅತಿ ದೊಡ್ಡ ಭರವಸೆ ಎಂದು ಟ್ರಂಪ್ ಉತ್ತರಿಸಿದ್ದಾರೆ.