* ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸಿ ವೈಲ್ಸ್ ಅವರನ್ನು (ಮಹಿಳಾ ಚೀಫ್ ಆಫ್ ಸ್ಟಾಫ್) ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. * ಅಮೆರಿಕ ಇತಿಹಾಸದಲ್ಲಿಯೇ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸೂಸಿ ವೈಲ್ಸ್ ಅವರು ಭಾಜನರಾಗಿದ್ದಾರೆ.* ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರ ವಿರುದ್ಧ ಜಯಭೇರಿ ಬಾರಿಸಿರುವ ಟ್ರಂಪ್ ಅವರ ಶ್ವೇತಭವನಕ್ಕೆ ವಾಪಸಾಗುವ ಹೆಜ್ಜೆಯಲ್ಲಿ ಮಾಡಿರುವ ಮೊದಲ ನೇಮಕ ಇದಾಗಿದೆ.* 2025ರ ಜನವರಿ 20ರಂದು ಟ್ರಂಪ್ ಅವರು ಅಧಿಕಾರ ಸ್ವೀಕರಿಸಲಿದ್ದು. ಅದಕ್ಕೂ ಮುನ್ನ ವಿವಿಧ ಹುದ್ದೆಗಳಿಗೆ ಸರಣಿ ನೇಮಕಾತಿಗಳು ನಡೆಯಲಿವೆ.* ಅಮೆರಿಕದ ಉಪಾಧ್ಯಕ್ಷರಾಗಿ ಅಯ್ಕೆಯಾಗಿರುವ ಜೆ.ಡಿ. ವ್ಯಾನ್ಸ್ ಅವರು ಈ ಆಯ್ಕೆಯನ್ನು ದೃಢಪಡಿಸಿದ್ದಾರೆ. * ಅಮೆರಿಕದ 45 ಮತ್ತು 47ನೇ ಅಧ್ಯಕ್ಷರಾದ ಡೊನಾಲ್ಡ್ ಜೆ.ಟ್ರಂಪ್ ಅವರು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯಶಸ್ವಿಯಾಗಿ ನಿಭಾಯಿಸಿದ ಪ್ರಚಾರ ವ್ಯವಸ್ಥಾಪಕಿ ಸೂಸನ್ ಸುಮೆರಲ್ ವೈಲ್ಸ್ ಅವರನ್ನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಘೋಷಿಸಿದ್ದಾರೆ" ಎಂದು ತಿಳಿಸಿದ್ದಾರೆ.* 2012ರಲ್ಲಿ ಉಟಾಹ್ ಗವರ್ನರ್ ಜಾನ್ ಹಂಟ್ಸ್ಮನ್ ಅವರ ಪ್ರಚಾರ ಹೊಣೆಯನ್ನು ಕೆಲವು ಸಮಯ ನಿಭಾಯಿಸಿದ್ದ ಸೂಸಿ ವೈಲ್ಸ್ ಅವರು 2016ರಲ್ಲಿ ಪ್ಲೋರಿಡಾದಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯದ ನೇತೃತ್ವ ವಹಿಸಿದ್ದರು. ಈ ಮೂಲಕ ಟ್ರಂಪ್ ಅವರ ಅಧ್ಯಕ್ಷ ಗಾದಿಯ ಹಾದಿಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.