* ಭಾರತದ ಪ್ರಸ್ತುತ ಹಣಕಾಸು ಕಾರ್ಯದರ್ಶಿ, ಐಎಎಸ್ ಅಧಿಕಾರಿ ತುಹಿನ್ ಕಾಂತಾ ಪಾಂಡೆ ಅವರನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ನೂತನ ಅಧ್ಯಕ್ಷರಾಗಿ ಫೆಬ್ರುವರಿ 27 ರಂದು (ಗುರುವಾರ) ನೇಮಕ ಮಾಡಲಾಗಿದೆ. * ಪ್ರಸ್ತುತ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಅವರು ಫೆಬ್ರವರಿ 28 ರಂದು ತಮ್ಮ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಅವರು ಮಾರ್ಚ್ 2, 2022 ರಂದು ಅಧಿಕಾರ ವಹಿಸಿಕೊಂಡರು. ಈಗ ತುಹಿನ್ ಕಾಂತ ಪಾಂಡೆ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. * ಭಾರತದ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರನ್ನು11 ನೇ ಅಧ್ಯಕ್ಷರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ.* ಬುಚ್ ಅವರಿಗಿಂತ ಹಿಂದಿನ ಸೆಬಿ ಅಧ್ಯಕ್ಷರಾದ ಅಜಯ ತ್ಯಾಗಿ ಮತ್ತು ಯುಕೆ ಸಿನ್ಹಾ ಇಬ್ಬರೂ ಸೆಬಿ ಅಧ್ಯಕ್ಷರಾಗಿ ವಿಸ್ತರಣೆಗಳನ್ನು ಪಡೆದಿದ್ದರು, ತ್ಯಾಗಿ ನಾಲ್ಕು ವರ್ಷಗಳ ಕಾಲ ಮತ್ತು ಸಿನ್ಹಾ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.- ವೃತ್ತಿಜೀವನದ ಮುಖ್ಯಾಂಶಗಳು :* ಹಣಕಾಸು ಕಾರ್ಯದರ್ಶಿಯಾಗಿ ಸೇವೆ* ಐಎಎಸ್ ಅಧಿಕಾರಿ (1987 ಬ್ಯಾಚ್, ಒಡಿಶಾ ಕೇಡರ್)* ಹಣಕಾಸು ಸಚಿವಾಲಯದಲ್ಲಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (DIPAM) ಕಾರ್ಯದರ್ಶಿಯಾಗಿ ಸೇವೆ* ಏರ್ ಇಂಡಿಯಾ ಖಾಸಗೀಕರಣ ಮತ್ತು LIC ಪಬ್ಲಿಕ್ ಇಶ್ಯೂಗಳಲ್ಲಿ ಪ್ರಮುಖ ಪಾತ್ರ