* ಇಸ್ರೊ ಸೂರ್ಯನ ಅಧ್ಯಯನಕ್ಕಾಗಿ ‘ಆದಿತ್ಯ ಎಲ್–1’ ಟೆಲಿಸ್ಕೋಪ್ ಮೊದಲ ಬಾರಿಗೆ ಸೌರಜ್ವಾಲೆಯ ದೃಶ್ಯಗಳನ್ನು ಸೆರೆಹಿಡಿದಿದೆ.* ISROಯ ಸೋಲಾರ್ ಅಲ್ಟ್ರಾವಯೋಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಸೂರ್ಯನಿಂದ ಹೊರ ಹೊಮ್ಮುವ ಭಾರಿ ಸೌರ ಜ್ವಾಲೆಯ ದೃಶ್ಯಗಳನ್ನು ಸೆರೆಹಿಡಿದಿದ್ದು ಶುಕ್ರವಾರ(ಫೆ.28) ಬಿಡುಗಡೆ ಮಾಡಿದೆ.* ಸೂರ್ಯನ ಕೆಳಭಾಗದ ಅತ್ಯಧಿಕ ತಾಪಮಾನ ಪ್ರದೇಶದಲ್ಲಿ ಸೌರ ಜ್ವಾಲೆ ಚಿಮ್ಮಿದಾಗ ಹೆಚ್ಚಿನ ಶಕ್ತಿ ಬಿಡುಗಡೆಗೊಳ್ಳುತ್ತದೆ. ಈ ಪ್ರದೇಶವನ್ನು ‘ಕರ್ನಲ್’ ಎಂದು ಕರೆಯಲಾಗುತ್ತಿದ್ದು, ದ್ಯುತಿಗೋಳ ಅಥವಾ ವರ್ಣಗೋಳ ಎಂದೂ ಹೆಸರಿಸಲಾಗಿದೆ. ಈ ಚಟುವಟಿಕೆಗಳನ್ನು ಅಲ್ಟ್ರಾ ವಯೋಲೆಟ್ ಬ್ಯಾಂಡ್ ದಾಖಲಿಸಿದ್ದು, ಇದನ್ನು ಇಸ್ರೊ ಪ್ರಕಟಿಸಿದೆ.* ಸೌರಜ್ವಾಲೆಯ ವೀಕ್ಷಣೆ ಭೂಮಿಯ ಮೇಲಿನ ಪರಿಣಾಮಗಳನ್ನು ಅರಿಯಲು ಮಹತ್ವದ ಹೆಜ್ಜೆ ಎಂದು ಇಸ್ರೊ ತಿಳಿಸಿದೆ. ಇದು ಭಾರತದ ಬಾಹ್ಯಾಕಾಶ ವಿಜ್ಞಾನದ ಪ್ರಮುಖ ಸಾಧನೆ ಎನಿಸಲಿದೆ.* 2023 ಸೆಪ್ಟೆಂಬರ್ 2ರಂದು ಪಿಎಸ್ಎಲ್ವಿ ಸಿ–57 ರಾಕೆಟ್ ಮೂಲಕ ಆದಿತ್ಯ ಎಲ್–1 ಉಡಾವಣೆಗೊಂಡಿತು. 2024 ಜನವರಿ 6ರಂದು ಇದು ಭೂಮಿಯಿಂದ 15 ಲಕ್ಷ ಕಿಮೀ ದೂರದ ಲ್ಯಾಗ್ರಾಂಜ್ ಎಲ್1 ಬಿಂದುವಿನಲ್ಲಿ ನೆಲೆಗೊಂಡು ಸೌರ ಚಟುವಟಿಕೆಗಳನ್ನು ನಿರಂತರವಾಗಿ ವೀಕ್ಷಿಸುತ್ತಿದೆ.* ಆದಿತ್ಯ ಎಲ್-1 ನಲ್ಲಿ 7 ಉಪಕರಣಗಳಿದ್ದು, 4 ಉಪಕರಣಗಳು ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕರೋನಾದ ಅಧ್ಯಯನಕ್ಕೆ, ಮಿಕ್ಕ 3 ಆಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹ ವೀಕ್ಷಣೆಗೆ. ಈ ಯೋಜನೆಗೆ ದೇಶದ 7 ಪ್ರಮುಖ ಭೌತ ವಿಜ್ಞಾನ ಸಂಸ್ಥೆಗಳ ಸಹಕಾರ ಇದೆ.* ಅಕ್ಟೋಬರ್ 29ರಂದು ಆದಿತ್ಯ ಎಲ್-1 ನ ಎಕ್ಸ್-ರೇ ಸ್ಪೆಕ್ಟ್ರೊಮೀಟರ್ ಸೂರ್ಯನ ಸೌರಜ್ವಾಲೆಯ ಕ್ಷ-ಕಿರಣವನ್ನು ಮೊದಲ ಬಾರಿಗೆ ದಾಖಲಿಸಿತು. ಇದು 10 ತಾಸುಗಳ ಕಾಲ ವೀಕ್ಷಣೆ ನಡೆಸಿ, ಸೌರಜ್ವಾಲೆಯ ಶಕ್ತಿಯ ಏರಿಳಿತಗಳನ್ನು ಸ್ಪಷ್ಟವಾಗಿ ದಾಖಲಿಸಿತು.* ಹಠಾತ್ ಸೌರ ಜ್ವಾಲೆಯ ಸ್ಫೋಟಕ ಶಕ್ತಿಯ ಅಧ್ಯಯನಕ್ಕೆ ಈ ದತ್ತಾಂಶ ನೆರವಾಗುತ್ತದೆ. ಎಕ್ಸ್ರೇ ಸ್ಪೆಕ್ಟ್ರೊಮೀಟರ್ ಅನ್ನು ಬೆಂಗಳೂರು ಯು.ಆರ್. ರಾವ್ ಉಪಗ್ರಹ ಕೇಂದ್ರದ ಸ್ಪೇಸ್ ಆಸ್ಟ್ರೊನಮಿ ಗ್ರೂಪ್ ಅಭಿವೃದ್ಧಿಪಡಿಸಿದೆ.