* ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10ಕ್ಕೆ ಅಂತ್ಯಗೊಳ್ಳಲಿದೆ. ಡಿಸೆಂಬರ್ 11 ರಂದು ಸಂಜಯ್ ಮಲ್ಹೋತ್ರಾ ನೂತನ ಗವರ್ನರ್ ಆಗಿ ನೇಮಕವಾಗಲಿದ್ದಾರೆ.* ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರು ಮುಂದಿನ ಮೂರು ವರ್ಷಗಳವರೆಗೆ ಈ ಹುದ್ದೆಯನ್ನ ಅಲಂಕರಿಸಲಿದ್ದಾರೆ. ಅವರು ಆರ್ಬಿಐನ 26ನೇ ಗವರ್ನರ್ ಆಗಲಿದ್ದಾರೆ.* ಸಂಜಯ್ ಮಲ್ಹೋತ್ರಾ, ರಾಜಸ್ಥಾನ ಕೇಡರ್ನ 1990-ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಪದವಿ ಮಾಡಿದ್ದಾರೆ.* 33 ವರ್ಷಗಳ ವಿಶಿಷ್ಟ ಸೇವೆಯೊಂದಿಗೆ ಮಲ್ಹೋತ್ರಾ ಅವರು ವಿದ್ಯುತ್, ಹಣಕಾಸು ಮತ್ತು ತೆರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಗಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ.* ಪ್ರಸಕ್ತ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ 2018ರ ಡಿಸೆಂಬರ್ನಲ್ಲಿ RBIನ 25ನೇ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಿಸಲಾಯಿತು. ಬಳಿಕ ಮತ್ತೆ 2021ರಲ್ಲಿ ಮೂರು ವರ್ಷಗಳ ವಿಸ್ತರಣೆಯನ್ನು ನೀಡಿದರು.* ಶಕ್ತಿಕಾಂತ ದಾಸ್ ಎರಡು ಬಾರಿ ಅವರ ಸೇವಾವಧಿ ವಿಸ್ತರಣೆ ಆಗಿದೆ. ಅತಿಹೆಚ್ಚು ಕಾಲ ಆರ್ಬಿಐ ಗವರ್ನರ್ ಆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.* ಬೆನೆಗಲ್ ರಾಮರಾವು ಎಂಬುವವರು 1949ರಿಂದ 1957ರವರೆಗೆ ಏಳೂವರೆ ವರ್ಷ ಕಾಲ RBIನ ಗವರ್ನರ್ ಆಗಿದ್ದರು. ಶಕ್ತಿಕಾಂತ ದಾಸ್ ಅವರು ಆರು ವರ್ಷ ಆರ್ಬಿಐ ಗವರ್ನರ್ ಆಗಿದ್ದಾರೆ.