* ನೈಜೀರಿಯಾ ಸರ್ಕಾರವು "ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್" ["The Grand Commander of The Order of the Niger" (GCON)] ಪುರಸ್ಕಾರವನ್ನು ನೀಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲಿದೆ.* ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿದೆ. ಇದರೊಂದಿಗೆ ಮೋದಿ ಅವರು ಈ ಗೌರವ ಸ್ವೀಕರಿಸಿದ ಎರಡನೇ ವಿದೇಶಿ ನಾಯಕ ಎನಿಸಲಿದ್ದಾರೆ. 1969ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಅವರಷ್ಟೇ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು.* ನೈಜೀರಿಯಾದ ಈ ಪುರಸ್ಕಾರವು ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಿಂದ ದೊರೆತ 17ನೇ ಪ್ರಶಸ್ತಿಯಾಗಲಿದೆ.* ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಮೋದಿ ಮೂರು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿನೈಜೀರಿಯಾದಲ್ಲಿದ್ದಾರೆ.* 17 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡಿದ ಮೊದಲ ಭೇಟಿ ಇದಾಗಿದೆ.* ಫೆಡರಲ್ ರಿಪಬ್ಲಿಕ್ ಆಫ್ ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವರಾದ ನೈಸೋಮ್ ಎಜೆನ್ವೊ ವೈಕ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.* ವೈಕ್ ಅವರು ಪ್ರಧಾನಿ ಮೋದಿಗೆ ಅಬುಜಾದ 'ನಗರದ ಕೀ' ಯನ್ನು ನೀಡಿದರು. ಈ ಕೀಲಿಯು ನೈಜೀರಿಯಾದ ಜನರು ಪ್ರಧಾನಿಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವವನ್ನು ಸಂಕೇತಿಸುತ್ತದೆ.* ಇತ್ತೀಚಿಗೆ ಡೊಮಿನಿಕಾ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಗೌರವ 'ಡೊಮಿನಿಕಾ ಅವಾರ್ಡ್ ಆಫ್ ಹಾನರ್' ಅನ್ನು ಮೂರು ದಿನಗಳ ಹಿಂದಷ್ಟೇ ಮೋದಿ ಅವರಿಗೆ ಘೋಷಿಸಿದೆ.* ಕೋವಿಡ್- 19 ಸಂದರ್ಭದಲ್ಲಿ ನೀಡಿದ ನೆರವು ಮತ್ತು ಉಭಯ ದೇಶಗಳ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ತೋರಿದ ಬದ್ಧತೆಯನ್ನು ಗುರುತಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. * ನವೆಂಬರ್ 19 ರಿಂದ 21 ರವರೆಗೆ ಗಯಾನಾದಲ್ಲಿ ನಡೆಯಲಿರುವ ಭಾರತ-ಕ್ಯಾರಿಕಾಮ್ ಶೃಂಗಸಭೆಯಲ್ಲಿ ಡೊಮಿನಿಕಾದ ಅಧ್ಯಕ್ಷ ಸಿಲ್ವಾನಿ ಬರ್ಟನ್ ಅವರು ಗೌರವವನ್ನು ಪ್ರದಾನ ಮಾಡಲಿದ್ದಾರೆ.