* ಭಾರತದ ಸಂವಿಧಾನದ ದಿನವನ್ನು ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ, ಮತ್ತು ಸಂವಿಧಾನದ ಅಂಗೀಕಾರದ ನೆನಪಿಗಾಗಿ ಇದನ್ನು ಆಚರಿಸಲಾಗುವುದು. 2015 ನವೆಂಬರ್ 19 ರಂದು ಭಾರತ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನದ ದಿನ ಎಂದು ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಿತು.* ಈ ಸಂವಿಧಾನದ ದಿನವನ್ನು "ರಾಷ್ಟ್ರೀಯ ಕಾನೂನು ದಿನ" ಎಂದು ಸಹ ಕರೆಯಲಾಗುವುದು.* ಸಂವಿಧಾನ 1949 ನವೆಂಬರ್ 26 ರಂದು ಅಂಗೀಕಾರವಾಯಿತು, ಮತ್ತು 1950 ಜನೆವರಿ 26 ರಂದು ಸಂವಿಧಾನ ಜಾರಿಗೆ ಬಂದಿದೆ.* ಕ್ಯಾಲಿಗ್ರಾಫಿಕ್ ಕಲೆಯ ಮಾಸ್ಟರ್ ಪ್ರೇಮ್ ಬಿಹಾರಿ ನರೇನ್ ರೈಜಾಡಾ ಅವರು ಏಕಾಂಗಿಯಾಗಿ ಕೈಯಿಂದ ಭಾರತದ ಸಂವಿಧಾನವನ್ನು ಬರೆದಿದ್ದಾರೆ. ಮೂಲ ಆವೃತ್ತಿಯನ್ನು ನಂದ್ಲಾಲ್ ಬೋಸ್ ಮತ್ತು ಬೆಯೋಹರ್ ರಾಮ ಮನೋಹರ್ ಸಿನ್ಹಾ ಅವರು ಸೇರಿದಂತೆ ಶಾಂತಿನಿಕೇತನದ ಕಲಾವಿದರು ಅಲಂಕೃತಗೊಳಿಸಿದ್ದಾರೆ.* ಈ ಸಂವಿಧಾನವನ್ನು ರಚಿಸಲು ತಗೆದುಕೊಂಡ ಒಟ್ಟು ಸಮಯ 2ವರ್ಷ 11ತಿಂಗಳು 18ದಿನ ಮತ್ತು 63,96,729 ಇದರ ವೆಚ್ಚವಾಗಿದೆ.* ಭಾರತದ ಸಂವಿಧಾನವು 25 ಭಾಗ, 12 ಅನುಚ್ಚೇಧ, 5 ಅನುಬಂಧಗಳು, ಸುಮಾರು 448 ವಿಧಿಗಳನ್ನು ಒಳಗೊಂಡಿದೆ.* 2023 ರ ಸೆಪ್ಟೆಂಬರ್ ವೇಳೆಗೆ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಸಂವಿಧಾನವು 1.46 ಲಕ್ಷ ಪದಗಳನ್ನು ಒಳಗೊಂಡಿದೆ.* ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ರಾಜ್ಯ ನಿರ್ದೇಶಕ ತತ್ತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ, ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್ನಿಂದ ಎರವಲು ಪಡೆಯಲಾಗಿದೆ.