* 'ನಂದಿನಿ' ಬ್ರ್ಯಾಂಡ್ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಪರಿಚಯಿಸಿರುವ 'ನಂದಿನಿ' ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 25 ರಂದು (ಬುಧವಾರ) ಬಿಡುಗಡೆ ಮಾಡಿದರು.* ಕೆಎಂಎಫ್ 'ರೆಡಿ ಟು ಕುಕ್' ಪರಿಕಲ್ಪನೆಯಡಿ ನಂದಿನಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಲಿನ ಉಪ ಉತ್ಪನ್ನ 'ವೇ ಪೌಡರ್' ಮತ್ತು ಗೋಧಿ ಬೆರೆಸಿ ತಯಾರಿಸಲಾಗುವ ಈ ಹಿಟ್ಟಿನಲ್ಲಿ ಪ್ರೊಟೀನ್ ಪ್ರಮಾಣ ಹೆಚ್ಚಿದೆ. ಇದು ಶುದ್ಧ ಸಸ್ಯಾಹಾರಿ ಉತ್ಪನ್ನವಾಗಿದೆ.* 450 ಗ್ರಾಂ ಹಿಟ್ಟಿನ ಪ್ಯಾಕೆಟ್ ಗೆ 40 ರೂ. ಮತ್ತು 900 ಗ್ರಾಂ ತೂಕದ ಪ್ಯಾಕೆಟ್ ಗೆ 80 ರೂ. ನಿಗದಿಗೊಳಿಸಲಾಗಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ರೆಡಿ ಹಿಟ್ಟುಗಳಿಗೆ ಹೆಚ್ಚು ಬೇಡಿಕೆಯಿರುತ್ತವೆ.* ನಂದಿನಿ ತನ್ನದೇ ಬ್ರ್ಯಾಂಡ್ ನ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದೆ. ಇದರಲ್ಲಿ ಶೇ.5 ರಷ್ಟು ಪ್ರೊಟೀನ್ ಕೂಡಾ ಇದ್ದು, ನಂದಿನಿಯ ಇತರೆ ಉತ್ಪನ್ನಗಳಂತೆ ಗುಣಮಟ್ಟವನ್ನು ಕಾಪಾಡಿಕೊಳ್ಳಲಿದೆ.* ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ನಿತ್ಯ 10ರಿಂದ 20 ಸಾವಿರ ಕೆ.ಜಿ ಹಿಟ್ಟನ್ನು ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ಜಯನಗರದಲ್ಲಿ ಪ್ಯಾಕಿಂಗ್ ಘಟಕ ತೆರೆಯಲಾಗಿದೆ.