* ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ 'ಹೈಪರ್ಲೂಪ್ ರೈಲು' ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದೆ. ವೇಗದ ಸಾರಿಗೆ ಆವಿಷ್ಕಾರದಲ್ಲಿ ಈ ಹೈಪರ್ಲೂಪ್ ರೈಲು ಸದ್ದು ಮಾಡುತ್ತಿದೆ.* ಭಾರತವು ಡಿಸೆಂಬರ್ 05 ರಂದು 410 ಮೀಟರ್ ಉದ್ದದ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.* ಕೇಂದ್ರ ರೈಲ್ವೆ ಇಲಾಖೆ ನೇತೃತ್ವದಲ್ಲಿ ಐಐಟಿ ಮದ್ರಾಸ್ನ ಐಐಟಿಯ 'ಆವಿಷ್ಕಾರ್ ಹೈಪರ್ಲೂಪ್' ಟೀಂ ಹಾಗೂ 'TuTr' (Tur Tur) ಎಂಬ ವಿನೂತನ ಸ್ಟಾರ್ಟ್ ಅಪ್ ಸಂಸ್ಥೆಗಳು ದೇಶಕ್ಕೆ ಮೊದಲ ಆವಿಷ್ಕಾರಿ ಹೈಪರ್ಲೂಪ್ ರೈಲು ಸೇವೆ ಪರಿಚಯಿಸುವ ಜವಾಬ್ದಾರಿ ನಿರ್ವಹಿಸುತ್ತಿವೆ.* ಭಾರತದಲ್ಲಿ ಮೊದಲ ಹೈಪರ್ಲೂಪ್ ರೈಲು ಸೇವೆಯನ್ನು ಪುಣೆಯಿಂದ ಮುಂಬೈಗೆ ಕಲ್ಪಿಸಲು ರೈಲ್ವೆ ಇಲಾಖೆ ಉತ್ಸುಕವಾಗಿದೆ. ಈ ರೈಲು ಪ್ರತಿ ಗಂಟೆಗೆ 1100 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.* IIT ಮದ್ರಾಸ್ನ 'ಆವಿಷ್ಕರ್ ಹೈಪರ್ಲೂಪ್' ತಂಡ ವರ್ಷಗಳಿಂದ ಸತತವಾಗಿ ಈ ರೈಲಿನ ವಿವಿಧ ಹಂತಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.* ಹೈಪರ್ಲೂಪ್ ಎಂಬುದು ಹಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ವಾತ ಕೊಳವೆಗಳಿಂದ (vacuum tubes) ನಿರ್ಮಿಸಿದ ಒಂದು ಸಾರಿಗೆ ಮಾರ್ಗ ಈ ಕೊಳವೆ ಮಾರ್ಗದಲ್ಲಿ ಪಾಡ್ಸ್ ರೂಪದಲ್ಲಿರುವ ಕ್ಯಾಬಿನ್ಗಳಲ್ಲಿ 24 ರಿಂದ 28 ಜನ ಕೂತು ಗಂಟೆಗೆ ಗರಿಷ್ಠ 1,100 ಕಿ.ಮೀ ವೇಗದಲ್ಲಿ ಪ್ರಯಾಣಿಸಬಹುದು.* ವಿದ್ಯುತ್ ಚಾಲಿತವಾಗಿ ಉಂಟಾಗುವ ಗಾಳಿಯ ಭಾರಿ ಪ್ರಮಾಣದ ಒತ್ತಡವು ಪಾಡ್ ಯಂತ್ರಗಳನ್ನು ಅತ್ಯಂತ ವೇಗವಾಗಿ ಚಲಿಸುವಂತೆ ಮಾಡುತ್ತದೆ.* ಭಾರತದಲ್ಲಿ ಮುಂಬೈ-ಪುಣೆ ಮಾರ್ಗದಲ್ಲಿ ಹೈಪರ್ಲೂಪ್ ಆರಂಭಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಹಾಕಿಕೊಂಡಿದೆ. ಒಂದು ವೇಳೆ ಈ ಮಾರ್ಗದಲ್ಲಿ ಹೈಪರ್ಲೂಪ್ ಆರಂಭವಾದರೆ 150 ಕಿ.ಮೀ ದೂರವನ್ನು ಕೇವಲ 25 ನಿಮಿಷದಲ್ಲಿ ಕ್ರಮಿಸಬಹುದು ಎನ್ನಲಾಗಿದೆ.* ಇಂಟರ್ಸಿಟಿ ಮಾರ್ಗಗಳಲ್ಲಿ ಅತಿ ವೇಗದ ಸಂಚಾರ ಸೇವೆಯನ್ನಾಗಿ ಹೈಪರ್ಲೂಪ್ ಅನ್ನು ಜಾರಿಗೆ ತರಬಹುದು ಎಂದು 2013 ರಲ್ಲಿ ಟೆಸ್ಲಾ ಸಿಇಇ ಎಲಾನ್ ಮಸ್ಕ್ ಅವರು ಹೈಪರ್ಲೂಪ್ ಕನಸನ್ನು ಪರಿಚಯಿಸಿದ್ದರು. ಆದರೆ, ಸದ್ಯ ಇದು ಇನ್ನೂ ಪ್ರಾಯೋಗಿಕ ಹಂತದಲ್ಲೇ ಇದೆ. ಚೀನಾ ಹಾಗೂ ಜಪಾನ್ನ ಬುಲೆಟ್ ಟ್ರೈನ್ಗಳು ಮಾತ್ರ ಸದ್ಯದ ನೆಲದ ಮೇಲಿನ ತ್ವರಿತ ಸಾರಿಗೆ ಸೇವೆಗಳಾಗಿವೆ.* ಎಲಾನ್ ಮಸ್ಕ್ ಪರಿಕಲ್ಪನೆ ಆಧರಿಸಿ ವರ್ಜಿನ್ ಕಂಪನಿಯು ಹೈಪರ್ಲೂಪ್ ಅತ್ತ ಮುಖ ಮಾಡಿದೆ. ಜಗತ್ತಿನ ಮೊದಲ ಹೈಪರ್ಲೂಪ್ ದುಬೈ- ಅಬುಧಾಬಿ ನಡುವೆ ಸಂಚರಿಸಲಿದೆ ಎಂದು ಹೇಳಲಾಗಿದೆ.