* ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ. ಕೃಷ್ಣಕುಮಾರ್ ಅವರನ್ನು ಮಣಿಪುರ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ನವೆಂಬರ್ 18 ರಂದು (ಸೋಮವಾರ) ಶಿಫಾರಸು ಮಾಡಿದೆ.* ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರು ನವೆಂಬರ್ 22 ರಂದು (ಶುಕ್ರವಾರ) ಮಣಿಪುರದ ಹೈಕೋರ್ಟ್ನ ಎಂಟನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಇಂಫಾಲದ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ನೂತನ ಮುಖ್ಯ ನ್ಯಾಯಮೂರ್ತಿ ಡಿ.ಕೃಷ್ಣಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.* ಮಣಿಪುರ ಹೈಕೋರ್ಟ್ನ ಹಾಲಿ ಮುಖ್ಯ ನ್ಯಾಯಮೂರ್ತಿ ಸಿದ್ದಾರ್ಥ್ ಮೃದುಲ್ ಅವರಿಗೆ 62 ವರ್ಷಗಳು ಪೂರ್ಣಗೊಂಡ ಕಾರಣ ಅವರ ಅಧಿಕಾರಾವಧಿಯು ನವೆಂಬರ್ 21.2024 ರಂದು (ಗುರುವಾರ) ಮುಕ್ತಾಯವಾಗಲಿದೆ. * ಕೃಷ್ಣಕುಮಾರ್ ಅವರು ಇದಕ್ಕೂ ಮುನ್ನ ಮದ್ರಾಸ್ 'ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಯಾಗಿ 2016 ಏಪ್ರಿಲ್ 7 ರಂದು ನೇಮಕಗೊಂಡಿದ್ದರು. ಇವರು 2025 ಮೇ 21ರಂದು ನಿವೃತ್ತರಾಗಲಿದ್ದಾರೆ.