* ಉತ್ತರಪ್ರದೇಶದಲ್ಲಿ ಕುಂಭಮೇಳದ ವೇಳೆ ಆದಿತ್ಯನಾಥ್ ಅವರು 'ಕುಂಭವಾಣಿ' ಎಂಬ ಎಫ್ಎಂ ಚಾನೆಲ್ (103.5) ಅನ್ನು ಉದ್ಘಾಟಿಸಿದ್ದಾರೆ.* ಕುಂಭಮೇಳದಲ್ಲಿ ಭಾಗಿಯಾಗಲು ಸಾಧ್ಯವಿರದ ಭಕ್ತರಿಗೆ ಕುಂಭಮೇಳದ ಬಗ್ಗೆ ತಿಳಿಯಲು ಇದು ನೆರವಾಗಲಿದೆ.* 2025ರ ಫೆಬ್ರವರಿ 26ರವರೆಗೆ, ಬೆಳಗ್ಗೆ 5.55 ರಿಂದ ರಾತ್ರಿ 10.5 ರವರೆಗೆ ಎಫ್ಎಂ ಪ್ರಸಾರವಾಗುತ್ತದೆ. ಜನವರಿ 29 ಮತ್ತು ಫೆಬ್ರವರಿ 3ರಂದು ಪ್ರಮುಖ ಸ್ನಾನದ ಆಚರಣೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.* ಕುಂಭವಾಣಿಯು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ 'ಶಿವ ಮಹಿಮಾ' ಎಂಬ ವಿಶೇಷ ಸ್ತುತಿಯನ್ನೂ ಪ್ರಸ್ತುತಿ ಪಡಿಸಲಿದೆ.* ಬೆಳಗ್ಗೆ 9ರಿಂದ 10 ಗಂಟೆವರೆಗೆ ನಮಸ್ಕಾರ ಪ್ರಯಾಗ್ ರಾಜ್, ಸಂಜೆ 4.30ರಿಂದ 5.30ರವರೆಗೆ ವಿವಿಧ ಟಾಕ್ ಶೋಗಳನ್ನು ಪ್ರಸಾರ ಮಾಡಲಾಗುತ್ತದೆ. ಇದು ಕೇಳುಗರಿಗೆ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.