* ಮೇ 1ರ ಕಾರ್ಮಿಕರ ದಿನದಂದು ಪೌರ ಹಾಗೂ ಕಾರ್ಮಿಕರ ಸೇವೆ ಕಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.* ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದರು.* "ಬಸವಣ್ಣನವರ ವಚನ – 'ಕಾಯಕವೇ ಕೈಲಾಸ' ಅನ್ನೋ ಮಾತಿನಂತೆ ನೀವು ಶ್ರಮಿಸುತ್ತಿದ್ದೀರಿ. ಪೌರ ಕಾರ್ಮಿಕರ ಕೆಲಸವನ್ನು ಇತರರು ಮಾಡುವುದು ಅಪರೂಪ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ" ಎಂದು ಅವರು ಹೇಳಿದರು.* "ಮುನ್ಸಿಪಲ್ ಕಾರ್ಮಿಕರಾಗಲಿ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ – ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಪವಿತ್ರ ಸೇವೆ ಮಾಡುತ್ತಿದ್ದೀರಿ. ನಿಮ್ಮನ್ನು ತೀರಾ ಗೌರವದಿಂದ ನೋಡಬೇಕು. ಸೇವೆಗೂ ಮಾನ್ಯತೆ ಬೇಕು, ಗೌರವ ಬೇಕು. ಈ ಹಿನ್ನೆಲೆಯಲ್ಲಿ, ನಿಮ್ಮ ಸೇವೆಗಳನ್ನು ಕಾಯಂಗೊಳಿಸಲಾಗುವುದು" ಎಂಬ ಭರವಸೆಯನ್ನು ಅವರು ನೀಡಿದರು.