* ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಸಂಸ್ಕೃತ ಅಕಾಡೆಮಿಯಲ್ಲಿ ಮಂಗಳವಾರ(ನ.12) ನಡೆದ 66ನೇ ಅಖಿಲ ಭಾರತ ಕಾಳಿದಾಸ ದಿನಾಚರಣೆ ಸಮಾರಂಭದಲ್ಲಿ ಮೈಸೂರಿನ ವರ್ಣಚಿತ್ರಕಾರ ಗಂಜೀಫಾ ರಘುಪತಿ ಭಟ್ಟ ಅವರಿಗೆ ಪ್ರತಿಷ್ಠಿತ 2023ನೇ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಉವರಾಷ್ಟ್ರಪತಿ ಜಗದೀಪ್ ಧನಕರ್ ಪ್ರದಾನ ಮಾಡಿದರು.* ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಭಾರತೀಯ ಸಂಸ್ಕೃತಿ ಮತ್ತು ಕಲೆಯಲ್ಲಿ ಜೀವಮಾನ ಸಾಧನೆಗಾಗಿ ಮಧ್ಯಪ್ರದೇಶ ಸರ್ಕಾರ ಪ್ರತಿ ವರ್ಷ ಕೊಡುತ್ತದೆ. ಈ ಪ್ರಶಸ್ತಿಯು 5 ಲಕ್ಷ ನಗದು ಬಹುಮಾನ, ಶಾಲು ಮತ್ತು ಫಲಗಳನ್ನು ಒಳಗೊಂಡಿದೆ.* ಈ ಪ್ರತಿಷ್ಠಿತ ಕಾಳಿದಾಸ್ ಸಮ್ಮಾನ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಉಪಸ್ಥಿತರಿದ್ದರು. * ಭಟ್ಟರು ಭಾರತೀಯ ಶಾಸ್ತ್ರೀಯ ಚಿತ್ರ ಗಂಜಿಫಾ ರಚನೆಯಲ್ಲಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದಾರೆ.* ಗಂಜೀಫಾ ಕಲಾವಿದರೆಂದೇ ಖ್ಯಾತರಾಗಿರುವ ರಘುನಾಥ್ ಭಟ್ ಅವರು ಶ್ರೀರಂಗಪಟ್ಟಣದಲ್ಲಿ ಇಂಥ ಎಲೆಗಳ ಸಂಗ್ರಹಾಲಯ ತೆರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ರಘುಪತಿ ಭಟ್ ಅವರು ಯುರೋಪಿನ ಕೆಲವು ದೇಶಗಳಲ್ಲಿ ಗಂಜೀಫಾ ಕಲಾ ಪ್ರದರ್ಶನವನ್ನು ನಡೆಸಿದ್ದಾರೆ. * ಗಾಂಜೀಫಾ ಇಸ್ಪೀಟಿನಂಥ ಒಂದು ಆಟ. ಇದಕ್ಕೆ ಛದ್ ಎಂಬ ಇನ್ನೊಂದು ಹೆಸರೂ ಇದೆ. ಬಾಬರ್ ನಾಮ, ಐನೆ ಅಕ್ಬರಿ, ಕಾಬೂನೆ ಇಸ್ಲಾಮ್, ಗಿರಿಧರ ಕೃತ ಗಂಜೀಫ್ ಲೇಖನ, ಶ್ರೀತತ್ತ್ವನಿಧಿ ಇತ್ಯಾದಿ ಗ್ರಂಥಗಳಲ್ಲಿ ಇದರ ವರ್ಣನೆಯಿದೆ. ಆಟದ ಪ್ರಕಾರ ಮತ್ತು ವಿವರಣೆಗಳಲ್ಲಿ ಒಂದು ಗ್ರಂಥಕ್ಕೂ ಇನ್ನೊಂದು ಗ್ರಂಥಕ್ಕೂ ವ್ಯತ್ಯಾಸವಿದೆ. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದಿತ್ತು. ಗಾಂಜೀಫಾ ಆಟವನ್ನು ಹೆಚ್ಚಾಗಿ ಮೊಘಲರು ಆಡುತ್ತಿದ್ದರು. ನಂತರ ಈ ಆಟ ಭಾರತೀಯ ಆಟವಾಗಿ ಖ್ಯಾತಿ ಪಡೆಯಿತು. ಗಾಂಜೀಫಾ ಆಟ 8-19ನೇ ಶತಮಾನದಲ್ಲಿ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.* ಮಧ್ಯಪ್ರದೇಶ ಸರ್ಕಾರ ಕರ್ನಾಟಕದ ಏಳು ಜನರಿಗೆ ಕಾಳಿದಾಸ್ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ.- ಮಲ್ಲಿಕಾರ್ಜುನ್ ಮನ್ಸೂರು- ಕುಮಾರ್ ಗಂಧರ್ವ- ಬಿವಿ ಕಾರಂತ್- ಗಿರೀಶ್ ಕಾರ್ನಾಡ್- ಪಂಡಿತ ಪಟ್ಟರಾಜ್ ಗವಾಯಿ- ಸರೋಜಾ ವೈದ್ಯನಾಥನ್- ವೆಂಕಟೇಶ ಕುಮಾರ್