* ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗು ಮಾಹಿತಿ ನೀಡಲು ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವ ಸಂಕುಲ ಸಮಸ್ಯೆ ಎದುರಿಸುತ್ತಿರುವ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.* ಮೊದಲ ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3, 2014 ರಂದು ಆಚರಿಸಲಾಯಿತು. ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ರಕ್ಷಣೆಗಾಗಿ 1973 ರಲ್ಲಿ CITES ಸಮಾವೇಶಕ್ಕೆ ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.* 20 ಡಿಸೆಂಬರ್ 2013 ರಂದು ಅದರ 68 ನೇ ಅಧಿವೇಶನದಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA) ಅದರ ನಿರ್ಣಯ UN 68/205 ರಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಮತ್ತು ಸಸ್ಯಗಳ (CITES) ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶವನ್ನು ಅಳವಡಿಸಿಕೊಳ್ಳುವ ಅಂತರರಾಷ್ಟ್ರೀಯ ದಿನವನ್ನು ಮಾರ್ಚ್ 3 ರಂದು ಘೋಷಿಸಲು ನಿರ್ಧರಿಸಿತು. * ವಿಶ್ವಸಂಸ್ಥೆಯ ಇತರ ಸಂಸ್ಥೆಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳ ವನ್ಯಜೀವಿ ಮತ್ತು ಸಸ್ಯಗಳ (CITIES) ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ ಕಾರ್ಯದರ್ಶಿಯ ಸಹಯೋಗದೊಂದಿಗೆ ವಿಶ್ವ ವನ್ಯಜೀವಿ ದಿನವನ್ನು ಆಚರಣೆ ಮಾಡುತ್ತದೆ.* ವಿಶ್ವ ವನ್ಯಜೀವಿ ದಿನದ ಮಹತ್ವ : - ಅಳಿವಿನಂಚಿನಲ್ಲಿರುವ ಪ್ರಾಣಿ, ಸಸ್ಯಗಳ ಪ್ರಭೇದಗಳು ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು- ಜೀವವೈವಿಧ್ಯವನ್ನು ಸಂರಕ್ಷಿಸಲು ಸಂರಕ್ಷಣಾ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು- ಆವಾಸಸ್ಥಾನ ನಾಶ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ತಡೆಗಟ್ಟಲು ಸುಸ್ಥಿರ ಅಭ್ಯಾಸಗಳನ್ನು ಬೆಂಬಲಿಸುತ್ತದೆ.- ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪರಿಸರ ವ್ಯವಸ್ಥೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.