* ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಪ್ರಮುಖ ಪರಿಸರ ಸಮಸ್ಯೆಗಳಲ್ಲಿ ಒಂದಾದ ನೀರಿನ ಕೊರತೆಯತ್ತ ಗಮನ ಹರಿಸಲು ನಾವು ಈ ದಿನವನ್ನು ಆಚರಿಸುತ್ತೇವೆ.* ಈ ವರ್ಷ 2025 ರ ವಿಶ್ವ ಜಲ ದಿನದ ಥೀಮ್ " ಹಿಮಪಾತ ಸಂರಕ್ಷಣೆ" ಎಂಬುದು ಥೀಮ್ ಆಗಿದೆ. * 1992 ರಲ್ಲಿ ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ನಡೆದ "ವಿಶ್ವಸಂಸ್ಥೆಯ (UN) ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನ"ದ ವೇಳಾಪಟ್ಟಿ 21 ರಲ್ಲಿ ವಿಶ್ವ ಜಲ ದಿನವನ್ನು ಸೇರಿಸಲಾಯಿತು. ಡಿಸೆಂಬರ್ 22, 1992 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು A/RES/47/193 ನಿರ್ಣಯವನ್ನು ಅಂಗೀಕರಿಸಿತು ಮತ್ತು ಮಾರ್ಚ್ 22 ಅನ್ನು ವಿಶ್ವ ಜಲ ದಿನವೆಂದು ಘೋಷಿಸಿತು. * 1993 ರಿಂದ ನೀರಿನ ಪ್ರಾಮುಖ್ಯತೆ ಮತ್ತು ಅದನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕ ಪ್ರಜ್ಞೆಯನ್ನು ಮೂಡಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ಸ್ಥಾಪಿಸಲಾಯಿತು.* ಜಲಸಂರಕ್ಷಣೆಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳು- ಜಲಜೀವನ ಮಿಷನ್- ಅಟಲ್ ಭುಜಲ್ ಯೋಜನೆ- ಜಲಶಕ್ತಿ ಅಭಿಯಾನ- ನ್ಯಾಷನಲ್ ವಾಟರ್ ಮಿಷನ್- ನಮಾಮಿ ಗಂಗೆ- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಮಿಷನ್ ಅಮೃತ ಸರೋವರ- ರಾಷ್ಟ್ರೀಯ ನದಿ ಸಂರಕ್ಷಣಾ ಕಾರ್ಯಕ್ರಮ- ರಾಷ್ಟ್ರೀಯ ಸರೋವರ ಸಂರಕ್ಷಣಾ ಕಾರ್ಯಕ್ರಮ- ಅಟಲ್ ಪುನರುಜ್ಜಿವನ ಮತ್ತು ನಗರ ಪರಿವರ್ತನೆ ಮಿಷನ್ 2.0- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ