* ವಿಶ್ವವಿದ್ಯಾಲಯಗಳಿಗೆ ಶ್ರೇಯಾಂಕ ನೀಡುವ ಲಂಡನ್ ಮೂಲದ ಕ್ಯೂಎಸ್ ಸಂಘಟನೆ ರ್ಯಾಂಕಿಂಗ್ ಪಟ್ಟಿ-2025' ಅನ್ನು ಪ್ರಕಟಸಿದೆ. ಭಾರತದಲ್ಲಿ ಚಂಡೀಗಢ ವಿವಿ ಭಾರತದ ಎಲ್ಲ ಖಾಸಗಿ ವಿವಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದರೆ, ಭಾರತದ ಎಲ್ಲ ವಿವಿಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ.* ಖಾಸಗಿ ವಿವಿಗಳಲ್ಲಿ ನಂ.1 ಸ್ಥಾನಗಳಿಸುವುದರ ಮೂಲಕ ಐಐಟಿಗಳು, ಐಐಎಸ್ ಸಿ, ಜೆಎನ್ ಯು ಗುಂಪಿಗೆ ಸೇರಿದೆ. ಹಲವು ವಿಭಾಗಗಳಲ್ಲಿ ಐಐಟಿ ಮತ್ತು ಎನ್ ಐಟಿಗಳಿಗಿಂತಲೂ ಮುಂಚೂಣಿಯಲ್ಲಿದೆ.* ಚಂಡೀಗಢ ವಿಶ್ವವಿದ್ಯಾಲಯವು ಚೀನಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ಉನ್ನತ ದೇಶಗಳಲ್ಲಿನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಗಳನ್ನು ಹಿಂದಿಕ್ಕಿದೆ. ಏಷ್ಯಾ ವಿಭಾಗದಲ್ಲಿ 29 ಸ್ಥಾನ ಮೇಲಕ್ಕೇರಿ 120ನೇ ಸ್ಥಾನ ಗಳಿಸಿದೆ.* ಕಳೆದ ವರ್ಷ ಚಂಡೀಗಢ ಶ್ರೇಯಾಂಕದಲ್ಲಿತ್ತು. ಉದ್ಯೋಗ ಖಾತ್ರಿ, ಬೋಧಕ- ವಿದ್ಯಾರ್ಥಿಗಳ ಅನುಪಾತ, ಕಾರ್ಯಕ್ಷಮತೆ ಸೇರಿದಂತೆ ಹಲವು ಸಂಗತಿಗಳಲ್ಲಿ ಅತ್ಯುತ್ತಮ ಗುಣಮಟ್ಟ ವನ್ನು ಕಾಯ್ದುಕೊಂಡಿರುವುದನ್ನು ಪರಿಗಣಿಸಲಾಗಿದೆ.* ಈ ಕುರಿತು ಪ್ರತಿಕ್ರಿಯಿಸಿರುವ ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಸತ್ಯಾಮ್ ಸಿಂಗ್ ಸಂಧು ಈ ಅವರು 'ಚಂಡೀಗಢ ವಿಶ್ವವಿದ್ಯಾಲಯವು ಏಷ್ಯಾದಲ್ಲಿ 120ನೇ ಸ್ಥಾನಗಳಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಖಾಸಗಿ ವಿವಿಗಳಲ್ಲಿ ನಂ.1 ಆಗಿರುವುದು ಅದ್ಭುತ ಸಾಧನೆಯಾಗಿದೆ. ಎಂದು ಚಂಡೀಗಢ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ಸತ್ಯಾಮ್ ಸಿಂಗ್ ಸಂಧು ಅವರು ಪ್ರತಿಕ್ರಿಯಿಸಿದ್ದಾರೆ.* ಒಟ್ಟು 65 ದೇಶಗಳ 3,000 ಕ್ಕೂ ಹೆಚ್ಚು ವಿವಿಧ ದೇಶಗಳ ವಿದ್ಯಾರ್ಥಿಗಳು ಚಂಡೀಗಢ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಎಲ್ಲ ವಲಯಗಳಲ್ಲೂ ಶ್ರೇಷ್ಠತೆಯನ್ನು ಸಾಧಿಸಿದ್ದೇವೆ." ಎಂದು ತಿಳಿಸಿದ್ದಾರೆ.