➤ ವಿಶೇಷವೆಂದರೆ, ಮೇ 20 ರಂದು ಲೋಕಾರ್ಪಣೆಗೊಂಡ ಮೊದಲ ನೌಕೆ 'ಸಂಘಮಿತ್ರ'ದ ನಂತರ, ಕೇವಲ ಮೂರು ತಿಂಗಳ ಅವಧಿಯಲ್ಲಿ GRSE ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಎರಡನೇ ಸಮರ ನೌಕೆ ಇದಾಗಿದೆ.
- ನಿರ್ಮಾಣ ಸಂಸ್ಥೆ: ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ (GRSE), ಕೋಲ್ಕತಾ
- ಉದ್ಘಾಟನೆ ಮಾಡಿದವರು: ಮಣಿಕಾ ಸಾಧು (ವೈಸ್ ಅಡ್ಮಿಖಲ್ ಸಂಜಯ್ ಸಾಧು ಅವರ ಧರ್ಮಪತ್ನಿ)
- ಯೋಜನೆಯ ಉದ್ದೇಶ: 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಭಾರತೀಯ ನೌಕಾಪಡೆಯ ಕಾವಲು ಕ್ಷಮತೆಯನ್ನು ಬಲಪಡಿಸುವುದು.
- ಉದ್ದ ಮತ್ತು ಅಗಲ: 113 ಮೀಟರ್ ಉದ್ದ, 14.6 ಮೀಟರ್ ಅಗಲ
- ತೂಕ (Displacement): ಸುಮಾರು 3,000 ಟನ್‌ಗಳು
- ಗರಿಷ್ಠ ವೇಗ: 23 ನಾಟ್ಸ್‌ಗಳು (Knots)
- ಸಂಚಾರ ಸಾಮರ್ಥ್ಯ (Endurance): 14 ನಾಟ್ಸ್ ವೇಗದಲ್ಲಿ 8,500 ನಾಟಿಕಲ್ ಮೈಲಿಗಳು
- ಮುಖ್ಯ ಕಾರ್ಯಗಳು: ಕಡಲ ಕಾವಲು, ಕಡಲ್ಗಳ್ಳತನ ತಡೆ (Anti-Piracy), ಶೋಧ ಮತ್ತು ರಕ್ಷಣೆ (HADR), ಸಾಗರ ಗಸ್ತು