* ಒಡಿಶಾ ರಾಜ್ಯಪಾಲ ರಘುಬರ ದಾಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ. * ಕೇರಳ, ಮಿಜೋರಾಂ, ಮಣಿಪುರಕ್ಕೂ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಈ ಮೂಲಕ ರಾಜ್ಯಪಾಲರ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.* ರಾಷ್ಟ್ರಪತಿ ದ್ರೌಪದಿ ಮುರ್ಮು 5 ರಾಜ್ಯಗಳ ರಾಜ್ಯಪಾಲರ ನೇಮಕದಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ದ್ರೌಪದಿ ಮುರ್ಮು ಇಬ್ಬರು ಹೊಸ ರಾಜ್ಯಪಾಲರನ್ನು ನೇಮಿಸಿದ್ದು, ಇತರ ಮೂವರ ರಾಜ್ಯಗಳ ಬದಲಾವಣೆ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. * ಬಿಹಾರ, ಒಡಿಶಾ, ಮಿಜೋರಾಂ, ಕೇರಳ ಮತ್ತು ಮಣಿಪುರ ರಾಜ್ಯಗಳ ರಾಜ್ಯಪಾಲರನ್ನು ರಾಷ್ಟ್ರಪತಿಗಳು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.* ಬಿಹಾರ, ಒಡಿಶಾ, ಮಿಜೋರಾಂ, ಕೇರಳ ಮತ್ತು ಮಣಿಪುರ ರಾಜ್ಯಗಳ ನೂತನ ರಾಜ್ಯಪಾಲರು :- ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.- ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ. - ಮಿಜೋರಾಂ ಗವರ್ನರ್ ಆಗಿ ಇದೀಗ ವಿಜಯ್ ಕುಮಾರ್ ಸಿಂಗ್ ನೇಮಕಗೊಂಡಿದ್ದಾರೆ. - ಕೇರಳ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೇಮಕವಾಗಿದ್ದಾರೆ. - ಬಿಹಾರ ರಾಜ್ಯಪಾಲರಾಗಿ ಮೊಹಮ್ಮದ್ ಆರೀಫ್ ಖಾನ್ ನೇಮಕಗೊಂಡಿದ್ದಾರೆ. ಮೊಹಮ್ಮದ್ ಆರೀಫ್ ಖಾನ್ ಇದುವರೆಗೆ ಕೇರಳ ಗವರ್ನರ್ ಆಗಿದ್ದರು.* 2021ರ ಜುಲೈ 19ರಿಂದ ಡಾ. ಹರಿಬಾಬು ಮಿಜೋರಾಂ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಒಡಿಶಾದ ರಾಜ್ಯಪಾಲರಾಗಿದ್ದಾರೆ.