* 1950ರಲ್ಲಿ ರಚಿಸಲಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ 2011ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ.* 2025 ರ ರಾಷ್ಟ್ರೀಯ ಮತದಾರರ ದಿನದ ಥೀಮ್ “ಮತದಾನ ಮಾಡೋದಕ್ಕಿಂತ ದೊಡ್ಡದೇನು ಇಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆ” (Nothing Like Voting, I Vote For Sure)ಎಂಬುದು ಥೀಮ್ ಆಗಿದೆ. * ಮತ ಚಲಾವಣೆಯ ಮಹತ್ವವನ್ನು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.* ಭಾರತ ಸರಕಾರವು ನಾಗರಿಕರಿಗೆ ಮತದಾನದ ಮಹತ್ವವನ್ನು ಒತ್ತಿ ಹೇಳಲು ಈ ದಿನವನ್ನು ಆಚರಿಸಲಾಗುತ್ತದೆ. ಚುನಾವಣೆಗಳಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನೂ ತನ್ನ ಮತದಾನದ ಹಕ್ಕನ್ನು ಚಲಾಯಿಸಬಹುದು.* ದಿನದ ಉದ್ದೇಶ: ಸಾರ್ವಜನಿಕರನ್ನು ಚುನಾವಣೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಮತದಾರರ ದಿನದ ಪ್ರಮುಖ ಉದ್ದೇಶ. ವಯಸ್ಸು, ಲಿಂಗ, ಜನಾಂಗೀಯ ಅಥವಾ ಇನ್ನಿತರ ಯಾವುದೇ ತಾರತಮ್ಯಗಳನ್ನು ಮಾಡದೆ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರತಿಯೊಬ್ಬ ಭಾರತೀಯನಿಗೂ ಅವಕಾಶ ಮಾಡಿ ಕೊಡುವುದು.* ಈ ರಾಷ್ಟ್ರೀಯ ಮತದಾರರ ಕಾರ್ಯಕ್ರಮದಲ್ಲಿ ಮಾಲ್ಡೀವ್ಸ್, ಫಿಲಿಪ್ಪೈನ್ಸ್, ರಷ್ಯಾ, ಶ್ರೀಲಂಕಾ ಹಾಗೂ ಉಜ್ಬೇಕಿಸ್ತಾನದ ಚುನವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.* ಮತದಾರರ ಮೈಲಿಗಲ್ಲು: 21.7 ಕೋಟಿ ಯುವ ಮತದಾರರು (18-29 ವಯಸ್ಸಿನವರು) ಮತ್ತು ಸುಧಾರಿತ ಚುನಾವಣಾ ಲಿಂಗ ಅನುಪಾತ (2024 ರಲ್ಲಿ 948 ರಿಂದ 2025 ರಲ್ಲಿ 954 ಕ್ಕೆ) ಸೇರಿದಂತೆ 99.1 ಕೋಟಿ ನೋಂದಾಯಿತ ಮತದಾರರೊಂದಿಗೆ ಭಾರತದ ಮತದಾರರ ಮೂಲವು 100 ಕೋಟಿ ಮಾರ್ಕ್ನ ಸಮೀಪದಲ್ಲಿದೆ. * 2024ರ ರಾಷ್ಟ್ರೀಯ ಮತದಾರರ ದಿನದ ಥೀಮ್ : "ಪ್ರತಿಯೊಬ್ಬರು ಮತ ಚಲಾಯಿಸುವಂತೆ ಮಾಡುವುದು; ಮತದಾನದಿಂದ ಯಾರೊಬ್ಬರೂ ದೂರ ಉಳಿಯದಂತೆ ನೋಡಿಕೊಳ್ಳುವುದು".