* ಭಾರತೀಯ ಬಾಹ್ಯಾಕಾಶ ಸಂಸ್ಥೆ 1963ರ ನವೆಂಬರ್ 21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಉಪಗ್ರಹ ಉಡ್ಡಯನ ನಡೆಸಿತ್ತು, ಬುಧವಾರ(ಜನವರಿ.29) ತನ್ನ 100ನೇ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ.* ಇಂದು(ಜ.29) ಬೆಳಿಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಎನ್'ವಿಎಸ್-02 ಉಪಗ್ರಹ ಹೊತ್ತ 'ಜಿಎಸ್ಎಲ್'ವಿ ಎಫ್-೧೫' ನಭಕ್ಕೆ ಚಿಮ್ಮಿತು ಎಂದು ಇಸ್ರೊ ತಿಳಿಸಿದೆ. ಈ ಮೂಲಕ ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್'ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.* ಇಸ್ರೋ ಅಧ್ಯಕ್ಷರಾಗ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ವಿ.ನಾರಾಯಣ್ ಅವರ ಪಾಲಿಗೆ ಇದು ಮೊದಲ ಮಹತ್ವದ ಬಾಹ್ಯಾಕಾಶ ಯೋಜನೆಯಾಗಿದೆ.* ರಾಕೆಟ್ ಉಡಾವಣೆ ಯಶಸ್ವಿ ಕುರಿತು ಮಾತನಾಡಿರುವ ನಾರಾಯಣ್ ಅವರು, ಈ ಸಾಧನೆಯು ಟೀಮ್ವರ್ಕ್'ನಿಂದ ಆಗಿದ್ದು, ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ವರ್ಷ ಇಸ್ರೋಗೆ ಬಿಡುವಿಲ್ಲದ ವರ್ಷವಾಗಿದೆ. * ಗನ್ಯಾನ ಭಾಗವಾಗಿ G1 ಮಿಷನ್ನ ತಯಾರಿಕೆಯಲ್ಲಿ ಉತ್ತಮವಾಗಿ ಮುನ್ನಡೆಯುತ್ತಿದ್ದೇವೆ. ಚಂದ್ರಯಾನ 4, ಚಂದ್ರಯಾನ 5 ಮಿಷನ್ಗಳ ಜೊತೆಗೆ ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಪ್ಯಾಡ್ ಮತ್ತು ಕುಲಶೇಖರಪಟ್ಟಣಂನಲ್ಲಿ ಎರಡನೇ ಉಡಾವಣೆ ಸೇರಿದಂತೆ ಹಲವಾರು ಯೋಜನೆಗಳಿವೆ. * ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಯನ್ನು ಹೊರತರುವಲ್ಲಿ ನನ್ನನ್ನು ಇಸ್ರೋ ಅಧ್ಯಕ್ಷನಾಗಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆಂದು ಹೇಳಿದ್ದಾರೆ.