* ಇಂಗ್ಲೆಂಡ್ ನಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದೆ.* ಭಾನುವಾರ(ಮಾರ್ಚ್ 23) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡವು.* ಭಾರತೀಯ ಮಹಿಳಾ ಹಾಗೂ ಪುರುಷರ ಕಬಡ್ಡಿ ತಂಡಗಳು ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಪ್ರಶಸ್ತಿ ಪಡೆದುಕೊಂಡಿವೆ. ಮಹಿಳಾ ತಂಡ 57-34 ಹಾಗೂ ಪುರುಷರ ತಂಡ 44-41 ಅಂತರದಿಂದ ಜಯಭೇರಿ ಬಾರಿಸಿದೆ.* ಭಾರತ ಲೀಗ್ ಹಂತದಲ್ಲಿ ಮೂರು ಗೆಲುವು, ಒಂದು ಡ್ರಾ ಸಾಧಿಸಿ ನಾಕೌಟ್ ಪ್ರವೇಶಿಸಿತು. ಎಂಟರ ಘಟ್ಟದಲ್ಲಿ ಹಂಗೇರಿಯನ್ನು, ಸೆಮಿಫೈನಲ್ನಲ್ಲಿ ವೇಲ್ಸ್ ಅನ್ನು ಸೋಲಿಸಿ ಫೈನಲ್ಗೆ ತಲುಪಿದ ಭಾರತ, ಅಮೋಘ ಪ್ರದರ್ಶನ ನೀಡಿತು.* ಭಾರತ ಮಹಿಳಾ ಕಬಡ್ಡಿ ತಂಡ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿ, ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 57-34 ಅಂತರದಿಂದ ಗೆದ್ದು ಚಾಂಪಿಯನ್ ಆಯಿತು.* ಮಹಿಳಾ ತಂಡ ಗುಂಪು ಹಂತದಲ್ಲಿ 89-18 ಅಂತರದಿಂದ ವೇಲ್ಸ್ ತಂಡವನ್ನು, 104-15 ಅಂತರದಿಂದ ಪೋಲೆಂಡ್ ತಂಡವನ್ನು ಮಣಿಸಿ ಅಬ್ಬರಿಸಿತು.* ಸೆಮಿಫೈನಲ್ನಲ್ಲಿ ಭಾರತ ಮಹಿಳಾ ತಂಡ 53-15 ಅಂತರದಿಂದ ಹಾಂಗ್ ಕಾಂಗ್ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ 57-34 ಅಂತರದಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿತು.* 2019 ರಲ್ಲಿ ಮಲೇಷ್ಯಾ ಆಯೋಜಿಸಿದ್ದ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಪುರುಷ ಮತ್ತು ಮಹಿಳಾ ಎರಡೂ ಕಿರೀಟಗಳನ್ನು ಗೆದ್ದುಕೊಂಡಿತು.* ಕಬಡ್ಡಿ ವಿಶ್ವ ಕಪ್ 2025 ಅನ್ನು ಇಂಗ್ಲೆಂಡ್ ಮಾರ್ಚ್ 17 ರಿಂದ 23 ರವರೆಗೆ ಆಯೋಜಿಸಿತ್ತು.