* ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಭಾರತ ಮತ್ತು ಹಲವು ಆಫ್ರಿಕನ್ ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡ ಆರು ದಿನಗಳ ಬೃಹತ್ ಸಮಾರಾಭ್ಯಾಸವನ್ನು ವೀಕ್ಷಿಸಲು ತಾಂಜಾನಿಯಾಕ್ಕೆ ಐದು ದಿನಗಳ ಪ್ರವಾಸವನ್ನು ಶನಿವಾರ (ಎ.12) ಕೈಗೊಂಡರು. ಈ ನೌಕಾ ಸಮರಾಭ್ಯಾಸ ದಾರ್-ಎಸ್-ಸಲಾಮ್‌ನಲ್ಲಿ ಭಾನುವಾರ (ಏ.13) ಪ್ರಾರಂಭವಾಗಲಿದೆ.* ಭಾರತೀಯ ನೌಕಾಪಡೆ ಮತ್ತು ತಾಂಜಾನಿಯಾ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಆತಿಥ್ಯದಲ್ಲಿ ‘ಆಫ್ರಿಕಾ–ಇಂಡಿಯಾ ಕೀ ಮೆರಿಟೈಮ್ ಎಂಗೇಜ್‌ಮೆಂಟ್’ (ಎಐಕೆಇವೈಎಂಇ) ನಡೆಯಲಿದೆ. * ಈ ಸಮರಾಭ್ಯಾಸದಲ್ಲಿ ಭಾರತ, ತಾಂಜಾನಿಯಾ ಜತೆಗೆ ಕೊಮೊರೊಸ್, ಜಿಬೌಟಿ, ಎರಿಟ್ರಿಯಾ, ಕೆನ್ಯಾ, ಮಡಗಾಸ್ಕರ್, ಮಾರಿಷಸ್, ಮೊಜಾಂಬಿಕ್, ಸೀಶೆಲ್ಸ್ ಮತ್ತು ದಕ್ಷಿಣ ಆಫ್ರಿಕಾ ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತೊಡಗಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ದೃಷ್ಟಿಕೋನಕ್ಕೆ ಅನುಗುಣವಾಗಿ ಆಫ್ರಿಕಾ ಖಂಡದೊಂದಿಗೆ ಭಾರತದ ಕಡಲ ಭದ್ರತಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವುದು ಈ ಯುದ್ಧಾಭ್ಯಾಸದ ಉದ್ದೇಶವಾಗಿದೆ.