* ಜಲ ಜೀವನ್ ಮಿಷನ್ (JJM) ಹರ್ ಘರ್ ಜಲ್ ಅಡಿಯಲ್ಲಿ 15.34 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಿಗೆ ಟ್ಯಾಪ್ ವಾಟರ್ ಪೂರೈಕೆಯ ಸೌಲಭ್ಯವನ್ನು ಪಡೆದುಕೊಂಡಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.* ಭಾರತ ದೇಶದಲ್ಲಿ 19.35 ಕೋಟಿ ಗ್ರಾಮೀಣ ಕುಟುಂಬಗಳಿವೆ ಮತ್ತು ಈ ಪೈಕಿ ಇಲ್ಲಿಯವರೆಗೆ 79.28 ಪ್ರತಿಶತದಷ್ಟು ಜಲ ಜೀವನ್ ಮಿಷನ್ (ಜೆಜೆಎಂ) ವ್ಯಾಪ್ತಿಗೆ ಒಳಪಟ್ಟಿವೆ. ನಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. * ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯವು 2019 ರಲ್ಲಿ ಜಲ ಜೀವನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಪ್ರತಿ ಗ್ರಾಮೀಣ ಮನೆಗಳಿಗೆ ಪ್ರತಿ ದಿನಕ್ಕೆ ನಿಯಮಿತವಾಗಿ 55 ಲೀಟರ್ ಟ್ಯಾಪ್ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ.- ಅಕ್ಟೋಬರ್ 6, 2024 ರಂತೆ 15.19 ಕೋಟಿ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ, ಇದು ಭಾರತದ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ 78.58% ಆಗಿದೆ- ಆಗಸ್ಟ್ 5, 2024 ರಂತೆ 15.04 ಕೋಟಿ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ, ಇದು ಭಾರತದ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ 77.87% ಆಗಿದೆ- ಜಲ ಜೀವನ್ ಮಿಷನ್ (ಜೆಜೆಎಂ) ಪ್ರಾರಂಭವಾದಾಗ ಆಗಸ್ಟ್ 2019 ರಲ್ಲಿ ಕೇವಲ 16.8% ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು.- 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರನ್ನು ಒದಗಿಸಿ- ಎಂಟು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು 100% ವ್ಯಾಪ್ತಿಯನ್ನು ಸಾಧಿಸಿವೆ.- ದಿನಕ್ಕೆ ತಲಾ 55 ಲೀಟರ್ಗಳ ಸೇವಾ ಮಟ್ಟದಲ್ಲಿ ನೀರನ್ನು ವಿತರಿಸಲಾಗುತ್ತದೆ.